ಕೆ.ಆರ್.ಪೇಟೆ : ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ತುರ್ತು ವಿಭಾಗದ ಮುಖ್ಯ ವೈದ್ಯ ಅಧಿಕಾರಿಯಾಗಿ (ಕ್ಯಾಶುಯಲ್ಟಿ ಮೆಡಿಕಲ್ ಆಫೀಸರ್ ) ಮೂಳೆ ತಜ್ಞ ವೈದ್ಯ ಡಾ: ರವಿ ಕುಮಾರ್ ನೇಮಕ ಗೊಂಡಿದ್ದಾರೆ.
ಪಟ್ಟಣದ ಶ್ರೀ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 11. ವರ್ಷಗಳ ಕಾಲ ಪ್ರಾಮಾಣಿಕ ಕರ್ತವ್ಯದ ಮೂಲಕ ಬಡ ರೋಗಿಗಳ ಮನಸ್ಸುಗೆದ್ದಿದ ಮೂಳೆ ತಜ್ಞ ವೈದ್ಯ ಡಾ. ರವಿ ಅವರು* 2022-23ನೇ ಸಾಲಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗಕ್ಕೆ ನಿಯೋಜನೆಗೊಂಡು ವ್ಯಾಸಂಗದಲ್ಲಿ ಉತ್ತೀರ್ಣಗೊಂಡ ನಂತರ ಮುಂದಿನ ಸ್ಥಳ ನಿಯುಕ್ತಿಗಾಗಿ ಆಯುಕ್ತಾಲಯದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಹಿನ್ನೆಲೆ. ಡಾ|| ರವಿ.ಎ,ಅವರು ಉಚ್ಚ ನ್ಯಾಯಾಲಯ ದಿನಾಂಕ:22.04.2026 ರಂದು ಆಯುಕ್ತಾಲಯದಲ್ಲಿ ಸಮಾಲೋಚನೆ ನಡೆಸಿದ ಉಚ್ಚ ನ್ಯಾಯಾಲಯ ಹಿನ್ನೆಲೆ.ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಗೆ ಡಾ.ರವಿ ಅವರನ್ನ ತುರ್ತು ವಿಭಾಗದ ಮುಖ್ಯ ವೈದ್ಯಧಿಕಾರಿಯಾಗಿ ಉಚ್ಚ ನ್ಯಾಯಾಲಯ ಆದೇಶಿಸಿ ಕರ್ತವ್ಯಕ್ಕೆ ಕೂಡಲೇ ಹಾಜರಾಗಿ ಆಯುಕ್ತಾಲಯ ಆದೇಶ ಪತ್ರವನ್ನು ಹೊರಡಿಸಿದ್ದಾರೆ.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ.
