ಕೆ.ಆರ್.ಪೇಟೆ:ತಾಲ್ಲೂಕು ಪದವಿ ಪೂರ್ವ ಕಾಲೇಜು ವಿಭಾಗದಿಂದ ಮಂಡ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಿರುವ ಎಸ್.ಎಸ್.ಕೆ.ಸಿ ಕಾಲೇಜು ವಿದ್ಯಾರ್ಥಿಗಳಾದ ಕೆ.ಆರ್.ಪೇಟೆಯ ಧನುಷ್ ವೈ, ಕರೋಟಿ ಪ್ರೀತಮ್, ಗೋವಿಂದಗೌಡನ ಕೊಪ್ಪಲಿನ ಹರ್ಷ, ಕಾರ್ತಿಕ್ ಹರಳಹಳ್ಳಿ, ಬೋಳಮಾರನಹಳ್ಳಿ ರೋಹಿತ್ ಗೌಡ, ಕಾರ್ತಿಕ್ ಗೌಡ ಜಿ.ಆರ್, ಹಾಗೂ ಜೂನಿಯರ್ ಕಾಲೇಜು ಬಂಡಿಹೊಳೆಯ ನಿಧಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಶ್ರೀ ಮಲ್ಲಿಕಾರ್ಜುನ್ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಅಭಿನಂದಿಸಿ ಶುಭ ಕೋರಿದರು.

ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ತಾಲ್ಲೂಕಿಗೆ ತುಂಬಾ ಹೆಮ್ಮೆಯ ವಿಷಯ. ಇದು ನಿಮ್ಮ ಶ್ರಮ, ಶಿಸ್ತು, ಗುರುಗಳ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹದ ಫಲ ಕ್ರೀಡೆ ಮನಸ್ಸಿಗೆ ಶಕ್ತಿ ಕೊಡುತ್ತದೆ, ಶಿಸ್ತು ಕಲಿಸುತ್ತದೆ. ರಾಜ್ಯ ಮಟ್ಟದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೂ ಹೋಗುವಂತಾಗಲಿ. ನಿಮ್ಮ ಪ್ರತಿಭೆಗೆ ನಮ್ಮ ಟ್ರಸ್ಟ್ ವತಿಯಿಂದ ಸದಾ ಬೆಂಬಲ, ಪ್ರೋತ್ಸಾಹ ಇರುತ್ತದೆ. ನೀವು ಗೆದ್ದು ಬಂದು ತಾಲ್ಲೂಕಿನ ಹೆಸರನ್ನು ಇನ್ನಷ್ಟು ಬೆಳಗಿಸಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಹರಿಚರಣ್ ತಿಲಕ್, ಹೊಸಹೊಳಲು ಮಂಜುನಾಥ್, ವಿಜಯಣ್ಣ, ಮಾರ್ಗೋನಹಳ್ಳಿ ಪ್ರದೀಪ್, ಲಿಂಗಾಪುರ ಯಶವಂತ್ ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ, ಕೆ.ಆರ್.ಪೇಟೆ*
