ಕೆ ಆರ್. ಪೇಟೆ: ತಾಲೂಕಿಗೆ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 97.89 ರಷ್ಟು ಫಲಿತಾಂಶ ಬಂದಿರುತ್ತದೆ.
ತಾಲೂಕು ಜಿಲ್ಲೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿರುತ್ತದೆ. ಈ ಬಾರಿ ತಾಲೂಕಿನಲ್ಲಿ ಬರೋಬ್ಬರಿ 39 ಶಾಲೆಗಳು ಶೇಕಡ 100ರಷ್ಟು ಫಲಿತಾಂಶ ಪಡೆಯುತ್ತವೆ. ಈ ಪೈಕಿ 23 ಸರಕಾರಿ ಶಾಲೆಗಳು ಶೇ.100 ಫಲಿತಾಂಶ ಪಡೆದಿರುವುದು ವಿಶೇಷವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೈ.ಕೆ.ತಿಮ್ಮೇಗೌಡ ಅವರು ತಿಳಿಸಿದರು.
ಕೆಆರ್ ಪೇಟೆ ಪಟ್ಟಣದ ಕ್ಷೇತ್ರಾಧಿಕಾರಿಗಳ ಕಚೇರಿಯಲ್ಲಿ ಎಸ್ಎಲ್ಸಿ ಫಲಿತಾಂಶದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂಬುದಕ್ಕೆ ಈ ಬಾರಿಯ ಫಲಿತಾಂಶದಲ್ಲಿ ಬರೋಬ್ಬರಿ 23 ಸರಕಾರಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿರುವುದು ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಪರೀಕ್ಷೆ ಬರೆದಿದ್ದ 2422 ವಿದ್ಯಾರ್ಥಿಗಳ ಪೈಕಿ 2071 ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿರುತ್ತಾರೆ.
1,132 ಗಂಡು ಮಕ್ಕಳು, 1,239 ಹೆಣ್ಣು ಮಕ್ಕಳು ಉತ್ತೀರ್ಣ ಹೊಂದುವ ಈ ಬಾರಿಯೂ ಕೂಡ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
*ಶೇಕಡ 100ರಷ್ಟು ಫಲಿತಾಂಶ ಪಡೆದಿರುವ ಸರ್ಕಾರಿ ಶಾಲೆಗಳ ವಿವರ*:
ಕೆ.ಆರ್.ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ,
ಅಗ್ರಹಾರಬಾಚಹಳ್ಳಿ, ಹೊಸಹೊಳಲು, ಮಡುವಿನ ಕೋಡಿ, ವಳಗರೆ ಮೆಣಸ, ಕೃಷ್ಣಾಪುರ, ಚಟ್ಟಂಗೆರೆ, ಆಲೇನ ಹಳ್ಳಿ, ಚುಜ್ಜಲ ಕ್ಯಾತನಹಳ್ಳಿ, ಆಲಂಬಾಡಿ, ತೇಂಡೇಕೆರೆ, ಕಿಕ್ಕೇರಿ, ಅಘಲಯ, ಅಕ್ಕಿಹೆಬ್ಬಾಳು, ಬಲ್ಲೇನಹಳ್ಳಿ, ಹರಿಹರಪುರ, ಮಾಕವಳ್ಳಿ, ಮಾದಾಪುರ, ಗವಿಮಠ ಮುರಾರ್ಜಿ ಶಾಲೆ, ಚಿಲ್ಲದ ಹಳ್ಳಿ ಬಳಿಯ ಮಾರ್ಗೋನಹಳ್ಳಿ ಮೊರಾರ್ಜಿ ವಸತಿ ಶಾಲೆ, ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ, ಮಾದಾಪುರ ಮುರಾರ್ಜಿ ಶಾಲೆ, ಸಾರಂಗಿ ಮುರಾರ್ಜಿ ವಸತಿ ಶಾಲೆ, ವಳಗೆರೆಮೆಣಸ ಕಿತ್ತೂರು ರಾಣಿ ಚೆನ್ನಮ್ಮ ಮುರಾರ್ಜಿ ವಸತಿ ಸರ್ಕಾರಿ ಪ್ರೌಢಶಾಲೆಗಳು ಶೇಕಡಾ 100ರಷ್ಟು ಫಲಿತಾಂಶ ಪಡೆದು ಕೊಂಡಿವೆ.
ಈ ಮೂಲಕ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವು ಚನ್ನಾಗಿದೆ ಎಂದು ಸಾಬೀತು ಪಡಿಸಿವೆ. ಹಾಗಾಗಿ ಪೋಷಕರು ತಮ್ಮ ಗ್ರಾಮದ ಬಳಿ ಇರುವ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
*ಸರ್ಕಾರಿ ಅನುಧಾನಿತ ಶಾಲೆಗಳ ವಿವರ*:
ಹರಿಯಾಲದಮ್ಮ ದೇವಸ್ಥಾನ ಜ್ಞಾನ ದೇಗುಲ ವಿದ್ಯಾಸಂಸ್ಥೆ, ಕೊರಟೀಕೆರೆ ಶ್ರೀ ಚನ್ನಕೇಶವ ಪ್ರೌಢಶಾಲೆ, ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣ ಪ್ರೌಢಶಾಲೆ, ಗ್ರಾಮಭಾರತಿ ವಿದ್ಯಾ ಸಂಸ್ಥೆ ಶೇ.100 ರಷ್ಟು ಫಲಿತಾಂಶ ಪಡೆದ ಅನುಧಾನಿತ ಶಾಲೆಗಳು.
*ಶೇ.100ಫಲಿತಾಂಶ ಪಡೆದ ಖಾಸಗಿ ಶಾಲೆಗಳ ವಿವರ*
ಪ್ರಗತಿ ಇಂಗ್ಲೀಷ್ ಪ್ರೌಢಶಾಲೆ, ಬೊಮ್ಮೇನಹಳ್ಳಿ ವಿವೇಕಾನಂದ ಶಾಲೆ, ಆಶೀರ್ವಾದ ಪ್ರೌಢಶಾಲೆ, ಕಿಕ್ಕೇರಿಯ ಕೇಂಬ್ರಿಡ್ಜ್ ಪ್ರೌಢಶಾಲೆ, ತೇಗನಹಳ್ಳಿ ಆಶೀರ್ವಾದ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೋಡಿಮಾರನಹಳ್ಳಿ ಚೈತನ್ಯ ಪ್ರೌಢಶಾಲೆ, ಆಚಾರ್ಯ ವಿದ್ಯಾ ಸಂಸ್ಥೆ, ಗಂಜಿಗೆರೆ ನೇತಾಜಿ ಕಾನ್ವೆಂಟ್ ಪ್ರೌಢಶಾಲೆ, ಪುರ ಗೇಟ್ ಛಾಯಾದೇವಿ ಭಾನುಪ್ರಕಾಶ್ ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.
*600ಕ್ಕಿಂತ ಹೆಚ್ಚು ಅಂಕ ವಿದ್ಯಾರ್ಥಿಗಳ ವಿವರ*:
ತೇಗನಹಳ್ಳಿ ಆಶಿರ್ವಾದ್ ಪ್ರೌಢಶಾಲೆ ಚರಣ್ಯ.ಕೆ.ಎಂ.(620) ಧನ್ಯತಾ.ಎಂ(620), ಆಚಾರ್ಯ ಪ್ರೌಢಶಾಲೆಯ ಎಲ್ ವೈ ಲಾವಣ್ಯಹ- 619, ಮಾದಾಪುರ ಮುರಾರ್ಜಿ ಶಾಲೆಯ ರಮ್ಯ ಜಿಎಸ್- 619, ಎಸ್ ಎಸ್ ಕೆ ಸಿ ಪ್ರೌಢಶಾಲೆ ಕೆಆರ್ ಪೇಟೆಯ ಭಾನುಜಾ.ಎಂ.ಕೆ-618,
ತೇಗನಹಳ್ಳಿ ಆಶೀರ್ವಾದ ಪ್ರೌಢಶಾಲೆಯ ಚಂದನ. ಎನ್- 613, ಆದಿಚುಂಚನಗಿರಿ ಶಾಲೆಯ ನೂರ್ ಅಪ್ಸನ್ -612, ತೇಗನಹಳ್ಳಿ ಆಶಿರ್ವಾದ್ ಪ್ರೌಢಶಾಲೆಯ ಭಾನುಪ್ರಕಾಶ್ ಜೆಎಂ-612, ಕಿಕ್ಕೇರಿ ಕೇಂಬ್ರಿಡ್ಜ್ ಶಾಲೆಯ ಹರ್ಷಿತಾ.ಜಿ.ವಿ-611, ಎಸ್.ಎಸ್.ಕೆ.ಸಿ ಶಾಲೆಯ ಹೇಮಾಶ್ರೀ.ಹೆಚ್.ಎನ್.609, ಕೆ ಆರ್ ಪೇಟೆ ಕೆಪಿಎಸ್ ಶಾಲೆಯ ಶಿಲ್ಪಶ್ರೀ .ಸಿ.ಎಂ-608, ಕಿಕ್ಕೇರಿ ಕೇಂಬ್ರಿಡ್ಜ್ ಶಾಲೆಯ ಜಿಎಸ್ ಭೂಮಿಕ 608, ಎಸ್ ಎಸ್ ಕೆ ಸಿ ಪ್ರೌಢಶಾಲೆಯ ಆಕಾಶ್ ಎಸ್ ಕಿರಣ್ ಕುಮಾರ್ 607, ತೇಗನಹಳ್ಳಿ ಆಶೀರ್ವಾದ ಶಾಲೆಯ ನಿಖಿಲ ಸಿ.ಎಸ್-606, ಕೆ ಆರ್ ಪೇಟೆ ಆದಿಚುಂಚನಗಿರಿ ಶಾಲೆಯ ಸರಸ್ವತಿ ಎನ್. ಎಲ್- 606, ತೇಗನಹಳ್ಳಿ ಆಶೀರ್ವಾದ ಪ್ರೌಢಶಾಲೆಯ ಡಿ ಶ್ರೇಯಸ್-606, ಕಿಕ್ಕೇರಿ ಕೇಂಬ್ರಿಡ್ಜ್ ಶಾಲೆಯ ಎಂ.ತಾರುಣ್ಯ – 606, ಎಸ್ ಎಸ್ ಕೆ ಸಿ ಶಾಲೆಯ ಎ. ಜಾಗೃತಿ-605, ತೇಗಿನಹಳ್ಳಿ ಆಶೀರ್ವಾದ ಪ್ರೌಢಶಾಲೆಯ ವಿ. ಸಿದ್ದಾರ್ಥ 605, ಕುಡಿಮಾರನಹಳ್ಳಿ ಚೈತನ್ಯ ಪ್ರೌಢಶಾಲೆಯ ಪೂರ್ವಿಕ ಕೆ ಗೌಡ 605, ಮಾರ್ಗೋನಹಳ್ಳಿ ಮುರಾರ್ಜಿ ದೇಸಾಯಿ ಶಾಲೆಯ ಶವಂತ.ದೇವರಾಜ್ ಗೌಡ- 605 ಅಂಕಗಳನ್ನು ಪಡೆದು ಉತ್ತೀರ್ಣ ಹೊಂದುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ತಾಲ್ಲೂಕು ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆಯಲು ಜಿಲ್ಲಾಧಿಕಾರಿ ಡಾ.ಕುಮಾರ್, ಜಿ.ಪಂ.ಸಿಇಓ ನಂದಿನಿ, ಶಾಸಕ ಹೆಚ್.ಟಿ.ಮಂಜು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಪ್ರೌಢಶಾಲೆಗಳ ಶಿಕ್ಷಕರ ಪರಿಶ್ರಮ ಮೂಲ ಕಾರಣವಾಗಿದೆ. ಸಹಕಾರ ನೀಡದ ಎಲ್ಲರಿಗೂ ಕೃತಜ್ಞತೆಗಳು ಹಾಗೂ ಪರಿಶ್ರಮದಿಂದ ಓದಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಹರೀಶ್, ಇತರರು ಇದ್ದರು.
