1. ಕುಡಿದು ಹೋದರೆ
ಮಡದಿ ಕದ ತೆಗೆಯುವುದಿಲ್ಲ
ಅದಕ್ಕೆ ನಾನು ರಾತ್ರಿ ಕುಡಿಯುವುದಿಲ್ಲ
ಹಗಲು ಹೇಳುವುದಿಲ್ಲ
2. ನಮ್ಮೂರ ಅಡಿಗೆ ಭಟ್ಟರು
ಸಂಜೆ ವಯಸ್ಸಿನಲ್ಲಿ ಮದುವೆಯಾದರು
ಸಪ್ಪೆ ಜೀವನದ ಸಾರು
ಉಪ್ಪು ಬೇಕಾಗಿತ್ತು ಮಾರಯರೇ
ಅದಕ್ಕೆ ಇರುಳುಗಣ್ಣಿನ ಹುಡುಗಿ
ಮದುವೆಯಾದೆ ಎಂದರು
3. ನಮ್ಮೂರಿನ ಬಾಲು
ಕುಡಿದಾಗ ಆಲ್ಕೋಹಾಲು
ಬಿಡುತ್ತಾನೆ ಆಹಾ ಎಂತಹ ರೈಲು ಶಿವ
ಏನು ಮಾಡಲಿ ಅವನೀಗ ರೈಲು ಸಚಿವ
4. ರಾಜಕೀಯದಾಟದಲ್ಲಿ
ಚುನಾವಣೆಯೇ ಮೈದಾನ
ರಾಜಕಾರಣಿಯೇ ಆಟದ ಚೆಂಡು
ಸೋಲು ಗೆಲುವಿನ ಸರದಾರರು
ಕಿಕ್ ಔಟ್ ಮತದಾರರು
—-
ಗೊರೂರು ಅನಂತರಾಜು,
ಹಾಸನ
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣಿ,
29ನೇ ವಾರ್ಡ್, 3 ನೇ ಕ್ರಾಸ್,
ಹಾಸನ- 573201
