ಕೊರಟಗೆರೆ : ಜನಪ್ರಿಯ ಜನನಾಯಕರು, ಯುವಕರ ಕಣ್ಮಣಿ, ಕ್ರೀಡಾಪಟುಗಳ ಆಶಾಕಿರಣ, ಯುವಕರ ಉತ್ತಮ ಮಾರ್ಗದರ್ಶಕರು ಹಾಗೂ ಲಕ್ಷಾಂತರ ಅಭಿಮಾನಿಗಳ ಬಳಗವನ್ನು ಹೊಂದಿರುವ ಸಮಾಜ ಸೇವಕರೂ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಪಿ.ಎನ್. ಕೃಷ್ಣಮೂರ್ತಿಯವರು ಕೊರಟಗೆರೆ ತಾಲ್ಲೂಕಿನ ಸಿ.ಎನ್. ದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾಮದಲ್ಲಿ ಗ್ರಾಮೀಣ ಪ್ರತಿಭೆಗಳಿಂದ ಅದ್ದೂರಿಯಾಗಿ ಆಯೋಜಿಸಲಾದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದರು.
ಡೈಮಂಡ್ ಕ್ರಿಕೆಟರ್ಸ್ ವತಿಯಿಂದ ಎರಡು ದಿನಗಳ ಟೆನ್ನಿಸ್ ಬಾಲ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನಡೆದ ಈ ಪಂದ್ಯಾವಳಿ, ಗ್ರಾಮೀಣ ಕ್ರಿಕೆಟ್ ಸಂಸ್ಕೃತಿಯನ್ನು ಎತ್ತಿಹಿಡಿದಂತಾಯಿತು. ಪಂದ್ಯಗಳು ರೋಚಕತೆಯಿಂದ ಕೂಡಿದ್ದು, ಎಲ್ಲರ ಗಮನ ಸೆಳೆದವು.

ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎನ್. ಕೃಷ್ಣಮೂರ್ತಿಯವರು, “ಈ ಟೂರ್ನಮೆಂಟ್ನಲ್ಲಿ ಭಾಗವಹಿಸಿದ ಎಲ್ಲಾ ಯುವಕರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂತಹ ಕ್ರೀಡಾಕೂಟಗಳಿಂದ ತಂಡಗಳ ನಡುವೆ ಸ್ನೇಹ, ಪ್ರೀತಿ ಹಾಗೂ ಬಾಂಧವ್ಯ ಬೆಳೆಯುತ್ತದೆ. ಉತ್ತಮ ಕ್ರೀಡಾಸ್ಫೂರ್ತಿ ರೂಪುಗೊಳ್ಳುತ್ತದೆ” ಎಂದರು.
ಅವರು ಮುಂದುವರೆದು, “ಕ್ರಿಕೆಟ್ ಕೇವಲ ಆಟವಲ್ಲ, ಇದು ಸಾವಿರಾರು ಲಕ್ಷಾಂತರ ಅಭಿಮಾನಿಗಳ ಜೀವಭಾವನೆಯಾಗಿದೆ. ನಾನು ಸಹ ಕ್ರಿಕೆಟ್ ಕ್ರೀಡಾಪಟುವಾಗಿ ರಾಜ್ಯಮಟ್ಟದ ತಂಡಗಳಲ್ಲಿ ಭಾಗವಹಿಸಿದ್ದೇನೆ. ನನ್ನ ಜೊತೆಯ ದೊಡ್ಡ ಗಣೇಶ್, ಚಿಕ್ಕ ಗಣೇಶ್, ರಾಬಿನ್ಸನ್ ಸೇರಿದಂತೆ ಅನೇಕ ಸ್ನೇಹಿತರು ರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ” ಎಂದು ನೆನಪಿಸಿಕೊಂಡರು.
ಟೂರ್ನಮೆಂಟ್ ಯಶಸ್ವಿಯಾಗಿ ಆಯೋಜಿಸಿದ್ದ ಕ್ರಿಕೆಟರ್ಸ್ ತಂಡಕ್ಕೆ ಪಿ.ಎನ್. ಕೃಷ್ಣಮೂರ್ತಿಯವರು ₹25,000 ನಗದು ಸಹಾಯ ನೀಡಿ ತಮ್ಮ ಕ್ರೀಡಾಪ್ರೇಮವನ್ನು ತೋರಿಸಿದರು.
ಕ್ಷೇತ್ರದ ಕ್ರೀಡಾರತ್ನ, ಸಮಾಜ ಸೇವಕರು ಹಾಗೂ ಯುವಕರ ಮಾರ್ಗದರ್ಶಕರಾದ ನಿಮಗೆ ದೇವರು ಉತ್ತಮ ಆರೋಗ್ಯ ನೀಡಲಿ, ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಮಟ್ಟಕ್ಕೆ ಏರಲಿ ಎಂದು ಬುಕ್ಕಪಟ್ಟಣ ಗ್ರಾಮದ ಕ್ರಿಕೆಟ್ ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಹಾರೈಸಿದರು.
ಈ ಸಂದರ್ಭದಲ್ಲಿ ಲಂಬು ರಾಜಣ್ಣ, ಲಕ್ಷ್ಮಣ್, ಗಂಗರಾಜು, ನವೀನ್, ಲಕ್ಕಿ, ಹನುಮಂತು, ಮೆಡಿಕಲ್ ರಂಗಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
