ಕೊರಟಗೆರೆ :- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಹೊಳವನಹಳ್ಳಿ ವತಿಯಿಂದ, ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ರವರ ಸಹಕಾರದೊಂದಿಗೆ ಮತ್ತು ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದೇವನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ದಿನಾಂಕ: 23-09-2026 ಬುಧವಾರ*
ಸಮಯ: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 03:00 ರವರೆಗೆ ತಪಾಸಣೆ ಕಾರ್ಯಕ್ರಮ ಇರುತ್ತದೆ
ಶಿಬಿರದಲ್ಲಿ ಲಭ್ಯವಿರುವ ಸೌಲಭ್ಯಗಳು:- ಕಣ್ಣಿನ ತಪಾಸಣೆ: ಕಣ್ಣಿನ ಪೊರೆ, ದೃಷ್ಟಿ ದೋಷ, ರೆಟಿನೋಪತಿ, ಲೇಸರ್ ಚಿಕಿತ್ಸೆ
ಸಾಮಾನ್ಯ ರೋಗ:
ಸಾಮಾನ್ಯ ಜ್ವರ, ತಲೆನೋವು, ಎದೆನೋವು, ಉಸಿರಾಟದ ತೊಂದರೆ
ಸ್ತ್ರೀ ರೋಗ: ಗರ್ಭಕೋಶ, ಬಿಳಿ ಮುಟ್ಟಿನ ತೊಂದರೆ, ಬಂಜೆತ
ಶಸ್ತ್ರಚಿಕಿತ್ಸೆ: ಪೈಲ್ಸ್, ಹೈಡ್ರೋಸಿಲ್, ಅಪೆಂಡಿಕ್ಸ್, ಗಡ್ಡೆಗಳು, ಪಿತ್ತಕೋಶದಲ್ಲಿ ಕಲ್ಲು

ಉಚಿತವಾಗಿ ದೊರೆಯುವ ಸೇವೆಗಳು:
ಬಿ.ಪಿ, ಸಕ್ಕರೆ ಕಾಯಿಲೆ, ಇ.ಸಿ.ಜಿ ಪರೀಕ್ಷೆ, ಗರ್ಭಿಣಿ ಸ್ತ್ರೀಯರಿಗೆ ಸ್ಕ್ಯಾನಿಂಗ್, ವೈದ್ಯರ ಸಮಾಲೋಚನೆ, ಉಚಿತ X-Ray, Ultrasound, CBC, URINE R/E, RBS ಮತ್ತು ಉಚಿತ ಔಷಧಿ ವಿತರಣೆ. ಹೆರಿಗೆಗೆ ಸಂಬಂಧಿಸಿದಂತೆ Free Deliveries, Cesarean Section ಸೌಲಭ್ಯ.
ಅಲ್ಲದೆ ಸಿ.ಟಿ ಮತ್ತು ಎಂ.ಆರ್.ಐ ಸ್ಕ್ಯಾನಿಂಗ್ ಮೇಲೆ 50% ರಿಯಾಯಿತಿ ಹಾಗೂ ಎಲ್ಲಾ ರೀತಿಯ ರಕ್ತ ಪರೀಕ್ಷೆಗಳ ಮೇಲೆ ರಿಯಾಯಿತಿ ದರದಲ್ಲಿ ಸೇವೆ ನೀಡಲಾಗುವುದು.
ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ತರತಕ್ಕದ್ದು.
ಈ ಶಿಬಿರದ ಸದುಪಯೋಗವನ್ನು ಹೊಳವನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ವಿ.ಎಸ್.ಎಸ್.ಎನ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಮನವಿ ಮಾಡಿದ್ದಾರೆ.
ಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣ, ಹೊಳವನಹಳ್ಳಿ, ಕೊರಟಗೆರೆ ತಾ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9035000081, 9916581325, 9141734096, 9902737929,
- ಶ್ರೀನಿವಾಸ್ ಆರ್.
