ತುಮಕೂರು: ಶ್ರೀ ಸಿದ್ಧಗಂಗಾ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನು ನೀಡುತ್ತಿಲ್ಲ ಶಿಕ್ಷಣದ ಜೊತೆ ಸಂಸ್ಕಾರವನ್ನು ಸಹ ನೀಡುತ್ತಿದೆ,ಇಲ್ಲಿನ ಗುರುಪರಂಪರೆ ಎಲ್ಲ ಕಾಲೇಜುಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ,ಸಿದ್ಧಗಂಗಾ ಕಾಲೇಜು ಜ್ಞಾನದೇಗುಲ,ಗುರುವಿನಿಂದ ಪಡೆದ ಶಿಕ್ಷಣವೇ ಎಲ್ಲದಕ್ಕೂ ಶಕ್ತಿ,ಉತ್ತಮ ಗುರು ಸಿಕ್ಕರೆ ಏನೂ ಬೇಕಾದರೂ ಸಾಧಿಸುತ್ತಾರೆ,ಸ್ವಾಮಿ ವಿವೇಕಾನಂದರಿಗೆ ರಾಮಕೃಷ್ಣಪರಮಹಂಸರು ಸಿಕ್ಕಹಾಗೆ ನಮಗೆಲ್ಲರಿಗೂ ಈ ಕಾಲೇಜಿನಲ್ಲಿ ಉತ್ತಮ ಅಧ್ಯಾಪಕರು ಸಿಕ್ಕರು ಹಾಗಾಗಿ ನಾವುಗಳು ಈ ಎತ್ತರಕ್ಕೆ ಸಾಗಲು ಅನುಕೂಲವಾಯಿತು,ಪೂಜ್ಯ ಶ್ರೀ ಶಿವಕುಮಾರಸ್ವಾಮೀಜಿಗಳ ಆಶೀರ್ವಾದದಿಂದ ಈ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿ ರಾಜ್ಯವಲ್ಲದೆ ವಿವಿಧ ರಾಷ್ಟ್ರಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ||ಬಿ.ಇ.ರಂಗಸ್ವಾಮಿರವರು ತಿಳಿಸಿದರು.
ಅವರು ಇಂದು ಕಾಲೇಜಿನ ಆವರಣದಲ್ಲಿರುವ ಡಾ|| ಶ್ರೀ.ಶ್ರೀ.ಶಿವಕುಮಾರಸ್ವಾಮೀಜಿಗಳ ಸಭಾಂಗಣದಲ್ಲಿ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ 23ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ,ಸಮ್ಮಿಲನ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಡಾ||ಹೆಚ್.ಪಿ.ವೀರಭದ್ರಸ್ವಾಮಿರವರು ಈ ಕಾಲೇಜು ಶಿಕ್ಷಣದೊಂದಿಗೆ ಸಾಂಸ್ಕೃತಿಕ ಭಾವನೆಯನ್ನು ಸಹ ಬೆಳೆಸುತ್ತಿದೆ,ಹಿರಿಯ ವಿದ್ಯಾರ್ಥಿಗಳ ಸಂಘವು ಮಾಡುತ್ತಿರುವ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ನೋಡಿಯೇ ತುಮಕೂರು ವಿಶ್ವವಿದ್ಯಾನಿಲಯವು ಪ್ರಾರಂಭಿಸಿದೆ,ಹಿರಿಯ ವಿದ್ಯಾರ್ಥಿಗಳ ಸಂಘದಿAದ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನ ಚಾಲನಾಪರನಾನಗಿ,ಶಿಕ್ಷಣಕ್ಕೆ ಧನಸಹಾಯರ್ಯಾಂಕ್ ವಿಜೇತರಿಗೆ,ದಿವ್ಯಾಂಗರಿಗೆ, ಉತ್ತಮ ಸಾಧನೆಗೈದ ಎನ್.ಎಸ್.ಎಸ್, ಎನ್.ಸಿ.ಸಿ, ಕ್ರೀಡಾ ವಿಜೇತ ವಿದ್ಯಾರ್ಥಿಗಳಿಗೆ ನಗದು ಮತ್ತು ನೆನಪಿನ ಕಾಣಿಕೆ ನೀಡುತ್ತಿರುವುದು ಹೀಗೆ ಪ್ರತಿವರ್ಷ ಹತ್ತಾರು ಉತ್ತಮ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲರಾದ ಡಾ||ಟಿ.ಬಿ.ನಿಜಲಿಂಗಪ್ಪರವರು ಮಾತನಾಡುತ್ತಾ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಸದಾ ಮಾರ್ಗದರ್ಶಕರಾಗಿ ಕಾಲೇಜಿಗೆ ಅಪಾರ ಕೊಡುಗೆಗಳನ್ನು ನೀಡುತ್ತಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದಾಯಕ ಸ್ಮಾರ್ಟ್ಕ್ಲಾಸ್ ರೂಂ,ಶುದ್ಧಕುಡಿಯುವ ನೀರಿನ ಘಟಕ,ಲ್ಯಾಬ್ ಗಳಿಗೆ ಉಚಿತ ಚೇರುಗಳ ಕೊಡುಗೆ,ಶಿಕ್ಷಕರು,ವಿದ್ಯಾರ್ಥಿಗಳು,ಸಂಸ್ಥೆಯ ನಡುವೆ ಕೊಂಡಿಯಾಗಿ ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಾ ಸೇವೆ ಸಲ್ಲಿಸುತ್ತಿದ್ದು ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ಸಂಘದ ಸೇವೆಯನ್ನು ಪಡೆದುಕೊಂಡು ಮುಂದಿನ ಜೀವನದಲ್ಲಿ ಯಶಸ್ವಿಯಾಗಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಡಾ||ಜಿ.ಆರ್.ರೇವಣ್ಣಸಿದ್ಧಪ್ಪರವರು ಹಿರಿಯ ವಿದ್ಯಾರ್ಥಿಗಳ ಸಂಘವು ಸದಾ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದು ಕಾಲೇಜಿನ ಅಭ್ಯದಯಕ್ಕಾಗಿ ವಿದ್ಯಾರ್ಥಿಗಳ ಏಳ್ಗೆಗಾಗಿ ಶ್ರಮವಹಿಸುತ್ತಿದೆ,ಕಾಯ,ವಾಚ,ಮನಸಾ ದುಡಿಯುತ್ತಿದೆ,ಸಂಘದ ನಿಸ್ವಾರ್ಥ ಸೇವೆಯೇ 23 ವರ್ಷಗಳ ಸುದೀರ್ಘ ಪಯಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಿದ್ದಾರೆ,ಉತ್ತಮ ವೃತ್ತಿಯನ್ನು ಪಡೆದು ಸಮಾಜದಲ್ಲಿ ಗಣ್ಯರೆನಿಸಿಕೊಂಡಿದ್ದಾರೆ,ಇನ್ನು 2 ವರ್ಷ ಕಳೆದರೆ ಸಂಘಕ್ಕೆ ಬೆಳ್ಳಿಹಬ್ಬದ ಸಂಭ್ರಮ ಎಲ್ಲ ಹಿರಿಯ ವಿದ್ಯಾರ್ಥಿಗಳು ತಮ್ಮ ಬ್ಯಾಚ್ ಮೆಟ್ ಗಳನ್ನು ಕರೆತಂದು ಸಂಘದ ಸದಸ್ಯರನ್ನಾಗಿ ಮಾಡಿ ಸಂಘದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಆರ್.ಬಸವರಾಜಪ್ಪ, ಕಾರ್ಯದರ್ಶಿ ಪ್ರೊ.ಲಿಂಗದೇವರಪ್ಪ.ಕೆ.ಎಸ್, ಜಂಟಿಕಾರ್ಯದರ್ಶಿಗಳಾದ ದಿನೇಶ್.ಜಿ.ಎಂ, ಪ್ರೊ.ಚೇತನ್ ಕುಮಾರ್.ಜಿ.ಎಂ, ಖಜಾಂಚಿ ಶ್ರೀಮತಿ ಆಶಾರಾಣಿ.ಆರ್.ಎಸ್, ನಿರ್ದೇಶಕರುಗಳಾದ ಪ್ರೊ.ಸಿ.ಎಸ್.ಸೋಮಶೇಖರಯ್ಯ, ಬಿ.ಎಸ್.ಸೂರ್ಯನಾರಾಯಣಗುಪ್ತ, ಪ್ರೊ.ಡಿ.ಆರ್.ಮೋಹನ್ ಕುಮಾರ್, ಪ್ರೊ.ಕೆ.ದಕ್ಷಿಣಾಮೂರ್ತಿ, ಕೆ.ಬಿ.ಚಂದ್ರಚೂಡ, ಹೆಚ್.ಆರ್.ನಾಗೇಶ್, ಟಿ.ಹೆಚ್.ಪ್ರಸನ್ನಕುಮಾರ್, ಜಿ.ಷಡಾಕ್ಷರಯ್ಯ, ಶ್ರೀಮತಿ ಜಲಜಾಕ್ಷಿ,ಶ್ರೀಮತಿ ಕೆ.ಎಸ್.ಇಂದ್ರಾಣಿ ಉಪಸ್ಥಿತರಿದ್ದರು.
ಪಲ್ಲವಿ ರವರು ಪ್ರಾರ್ಥಿಸಿದರು,ಪ್ರೊ.ಮೋಹನ್ ಕುಮಾರ್ ರವರು ಸ್ವಾಗತಿಸಿದರು,ಹೆಚ್.ಆರ್.ನಾಗೇಶ್ ರವರು ವಂದಿಸಿದರು.
– ಚಂದ್ರಚೂಡ ಕೆ.ಬಿ.
