ಕೊರಟಗೆರೆ ;- ಏ.30 ರಂದು ವಯೋ ನಿವೃತ್ತಿ ಹೊಂದುವ ಶಿಕ್ಷಕರುಗಳಿಗೆ ಗೌರವ ಸಮರ್ಪಣೆ ಹಾಗೂ 2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಕನ್ನಡ ಭಾಷೆಯಲ್ಲಿ 125 ಅಂಕಗಳಿಸಿ ತಾಲೂಕಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏ.30 ರಂದು ಏರ್ಪಡಿಸ ಲಾಗಿದೆ ಎಂದು ಕನ್ನಡ ಶಿಕ್ಷಕ ಲಕ್ಷ್ಮಿಪುತ್ರ ತಿಳಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ ಶಾಲಾ ಶಿಕ್ಷಣ ಇಲಾಖೆ, ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ವೇದಿಕೆ, ಶಿಕ್ಷಕರ ಗೆಳೆಯರ ಬಳಗ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ.ಎಸ್ಟಿ ನೌಕರರ ಸಮನ್ವಯ ಸಮಿತಿ ಕೊರಟಗೆರೆ ತಾಲೂಕು ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾರ್ಗದರ್ಶನದಲ್ಲಿ ಶಿಕ್ಷಣಭೀಷ್ಮ ಹೆಚ್. ಗಂಗಾಧರಯ್ಯ ರವರ ಸ್ಮರಣಾರ್ಥ ಕೊರಟಗೆರೆ ತಾಲೂಕಿನ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಏ.30 ರಂದು ವಯೋ ನಿವೃತ್ತರಾಗುತ್ತಿರುವ ಶಿಕ್ಷಕರುಗಳಿಗೆ ತಾಲೂಕಿನ ಬುಕ್ಕಪಟ್ಟಣ ಸರ್ಕಾರಿ ಶಾಲೆಯಲ್ಲಿ ಏ.30 ರಂದು ಬೆಳಿಗ್ಗೆ 10-30 ಕ್ಕೆ ವಯೋನಿವೃತ್ತಿ ಹೊಂದುವ ಶಿಕ್ಷಕರುಗಳಿಗೆ ಗೌರವ ಸಮರ್ಪಣೆ ಹಾಗೂ ಬಿಳ್ಕೊಡಿಗೆ ಮತ್ತು ತಾಲೂಕಿನಲ್ಲಿ 2025-26ನೇ ಸಾಲಿನಲ್ಲಿ ಎಸ್,ಎಸ್,ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಚಾಣುಕ್ಯ ಪಬ್ಲಿಕ್ ಶಾಲೆಯ ಪಿ.ಎಸ್.ಹರ್ಷ( ಶೇ.98.88), ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೆ.ಎಂ. ಲೋಚನ (ಶೇ.97.6), ರವೀಂದ್ರ ಭಾರತಿ ಪ್ರೌಢಶಾಲೆಯ ಕೆ.ಎಂ.ಹೇಮಂತ್ (ಶೇ.87.44) ವಿದ್ಯಾರ್ಥಿಗಳಿಗೆ ಹಾಗೂ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದ್ದು ತಾಲೂಕಿನ ಎಲ್ಲಾ ಶಾಲೆಗಳ ಶಿಕ್ಷಕರುಗಳು ಹಾಗೂ ಪೊಷಕರುಗಳು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
