ಕೊರಟಗೆರೆ: ಅತಿಯಾದ ಹೊಟ್ಟೆ ನೋವಿನಿಂದ ಬೇಸತ್ತು ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮೃತನನ್ನು ಹೊಳವನಹಳ್ಳಿ ಇಂದ್ರ ಕಾಲೋನಿಯ ನಿವಾಸಿ ಲೇ ಸಿಪ್ಪಾನ್ ರಾಜಾ ಮತ್ತು ಲೇ ನಸೀನಾಬಾನು ದಂಪತಿಗಳ ಎರಡನೇ ಪುತ್ರ ಸಮೀರ್ ಅಬ್ಬಾಸ್ (21) ಎಂದು ಗುರುತಿಸಲಾಗಿದೆ.
ಗಾರೆ ಕೆಲಸ ಮಾಡುತ್ತಿದ್ದ ಸಮೀರ್ ಅವರು ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಹೊಳವನಹಳ್ಳಿ ಗ್ರಾಮದ ಹಸ್ಕಾರಿ ಮಸೀದಿ ಆವರಣದಲ್ಲಿರುವ ಹುಣಸೆ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ.
ಅತಿಯಾದ ಹೊಟ್ಟೆ ನೋವಿನ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಈ ನಿರ್ಧಾರಕ್ಕೆ ಕೈ ಹಾಕಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಕೊರಟಗೆರೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
-ಶ್ರೀನಿವಾಸ್ ಕೊರಟಗೆರೆ.
