ತುಮಕೂರು: ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ 2ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯದಿಂದ ನ್ಯಾಯಾಲಯದ ಕಲಾಪ ಮುಗಿಸಿಕೊಂಡು ಹೊರಬರುತ್ತಿದ್ದ ವಕೀಲರಾದ ಎಂ.ಸಿ.ರವೀಶ್(52ವರ್ಷ) ಎಂಬುವವರ ಮೇಲೆ ಕೇಸಿನ 2ನೇ ಎದುರುದಾರನಾದ ಬಿ.ಎ.ನಿರಂಜನ್ ಬಿನ್ ಅಡವೀಶಯ್ಯ ಎನ್ನುವವರು ಏಕಾಏಕಿ ವಕೀಲರ ಮೇಲೆ ಕಲ್ಲಿನಿಂದ ಎರಗಿ ಎಡ ಮುಖ,ತುಟಿಗೆ,ಕೆನ್ನೆ ಮೇಲೆ ಬಾರಿಸಿ ಅಶ್ಲೀಲವಾಗಿ ಬೈದು,ಸಾರ್ವಜನಿಕವಾಗಿ ಹಲ್ಲೆ ಮಾಡಿ,ಜೀವ ಬೆದರಿಕೆ ಹಾಕಿದ್ದು ವಕೀಲರು ನನಗೆ ಪ್ರಾಣಭೀತಿ ಇದೆ,ನನ್ನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ ನನಗೆ ಪೋಲೀಸ್ ರಕ್ಷಣೆ ನೀಡಿ ಎಂದು ವಕೀಲರೊಂದಿಗೆ ನಗರ ಪೋಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಪ್ರಕರಣದ ಆರೋಪಿ ಓಡಿ ಹೋಗಿದ್ದಾನೆ ಎಂದು ತಿಳಿದುಬಂದಿದೆ.ಜಿಲ್ಲಾ ವಕೀಲರ ಸಂಘದ ಸದಸ್ಯರು ಸದರಿ ಕೃತ್ಯವನ್ನು ಖಂಡಿಸಿ ಅಪರಾಧಿಯನ್ನು ಬಂಧಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
– ಚಂದ್ರಚೂಡ ಕೆ.ಬಿ
