ತುಮಕೂರು:ಸಮಾಜದಲ್ಲಿ ಕಷ್ಟದಲ್ಲಿರುವವರ ಪರ ಧ್ವನಿಯಾಗಿ,ಸಮಾಜದ ಕಟ್ಟಕಡೆಯ ವ್ಯಕ್ತಿಯ ಪರ ಹೋರಾಟ ಮಾಡೋಣ,ಧರ್ಮವನ್ನು ಕಾಯೋಣ,ಧರ್ಮದ ಹಾದಿಯಲ್ಲಿ ನಡೆದು ಸಮಾಜಸೇವೆಯನ್ನು ಮಾಡೋಣ,ಸಮಾಜವನ್ನು ದುಡಿಸಿಕೊಳ್ಳುವುದು ಬೇಡ ಸಮಾಜಕ್ಕಾಗಿ ದುಡಿಯೋಣ,ದೇಶದಲ್ಲಿ ಬರ ಬಂದಿದೆ ಅನ್ನವನ್ನು ವೃಥಾ ಎಸಯದೆ ಹಸಿದವರಿಗೆ ನೀಡಿ ಅವರ ಹಸಿವನ್ನು ನೀಗಿಸುವ ಕೆಲಸವನ್ನು ಮಾಡಬೇಕು,ರೈತರು,ಜನ ಜಾನುವಾರುಗಳ ರಕ್ಷಣೆ ಎಲ್ಲರ ಹೊಣೆ ಹುಟ್ಟುಹಬ್ಬ ಕೇವಲ ಒಂದು ನಿಮಿಥ್ಯ ವರ್ಷ ವರ್ಷ ಬರುತ್ತದೆ ಆದರೆ ನಾವು ಬದುಕಿರುವವರೆಗೆ ಸಮಾಜಕ್ಕಾಗಿ ಏನು ಮಾಡುತ್ತೇವೆ ಎಂಬುದು ಮುಖ್ಯ,ಸಮಾಜ ನಮಗೆ ಏನು ಕೊಟ್ಟಿದೆ ಎಂಬುದಕ್ಕಿಂತ ಸಮಾಜಕ್ಕೆ ನಾವು ಏನು ಕೊಟ್ಟೆವು ಎಂಬುದು ಮುಖ್ಯವಾದ ಸಂಗತಿ ಎಂದು ಹಿರಿಯ ಸಮಾಜ ಸೇವಕ,ಜಯನಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು ತಿಳಿಸಿದರು.

ಅವರು ಇಂದು ಜಯನಗರ ಕ್ಷೇಮಾಭಿವೃದ್ಧಿ ಸಂಘ(ರಿ),ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ(ರಿ),ಆರ್.ಎಸ್.ವೀರಪ್ಪದೇವರ ಅಭಿಮಾನಿ ಬಳಗ,ಸ್ನೇಹಿತರು ಮತ್ತು ಬಡಾವಣೆಯ ನಾಗರೀಕರು ಏರ್ಪಡಿಸಿದ್ದ ಅವರ 60ನೇ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡುವುದರ ಮೂಲಕ ಸರಳವಾಗಿ ಆಚರಿಸಿದರು.
ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ(ರಿ)ನ ಅಧ್ಯಕ್ಷರಾದ ಆರ್.ಎಸ್.ಶಿವಶಂಕರ್ ರವರು ಮಾತನಾಡುತ್ತಾ ಆರ್.ಎಸ್.ವೀರಪ್ಪದೇವರು ಹುಟ್ಟು ಹೋರಾಟಗಾರರು,ಸಮಾಜ ಚಿಂತಕರು,ಬಡಾವಣೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ,ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆ,ಪೋಲೀಸ್ ಠಾಣೆ ನಿರ್ಮಾಣ,ಯೋಗತರಬೇತಿ ಕೇಂದ್ರ,ಅಂಚೆ ಕಚೇರಿ,ರಸ್ತೆ,ಚರಂಡಿ,ಬೀದಿ ದೀಪ,ಶೆಟ್ಟಿಹಳ್ಳಿ ಗೇಟ್ ಅಂಡರ್ ಪಾಸ್,ರೈಲ್ವೇ ಮೇಲ್ಸೇತುವೆ ಹೀಗೆ ಹಲವಾರು ಉತ್ತಮ ಕಾರ್ಯಗಳನ್ನು ಮಾಡುತ್ತಾ ಜನರೊಂದಿಗೆ ಹೋರಾಟ ಮಾಡುತ್ತಾ ನಾಗರೀಕರೊಂದಿಗೆ ಉತ್ತಮ ಜನಸಂಪರ್ಕ ಇಟ್ಟುಕೊಂಡು ಬಡಾವಣೆಯ ಮಹಿಳೆಯರ ರಕ್ಷಣೆಗೆ ಮಹಿಳಾ ಸಂಘಗಳನ್ನು ರಚಿಸಿ ಅವರ ಮೂಲಕ ಮಹಿಳೆಯರಿಗೆ ಅಭಯವನ್ನು ನೀಡುತ್ತಾ ಅವಶ್ಯಕತೆ ಇದ್ದವರಿಗೆ ಪೋಲೀಸ್ ರಕ್ಷಣೆ ನೀಡಿ,ಕಾನೂನು ಅವಶ್ಯಕತೆ ಇದ್ದವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ನ್ಯಾಯಾಧೀಶರು,ವಕೀಲರಿಂದ ಕಾನೂನು ತಿಳುವಳಿಕೆ ನೀಡುತ್ತಾ ನಗರಕ್ಕೆ ಮಾದರಿ ವ್ಯಕ್ತಿಗಳಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಕೆ.ಆರ್.ಮಂಜುಳಾ,ಪ್ರೊ.ಟಿ.ನಾಗರಾಜು, ಮಂಜಣ್ಣ, ಶಾಂತರಾಜು, ಬಿ.ವಿ.ದ್ವಾರಕಾನಾಥ್, ಕುಮಾರಸ್ವಾಮಿ, ರುದ್ರಮೂರ್ತಿಎಲೆರಾಂಪುರ, ಪ್ರೇಮಾರಾಧ್ಯ, ಶ್ರೀಮತಿ ಸೌಭಾಗ್ಯ, ಲಕ್ಷ್ಮೀನಾರಾಯಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
