ಕೆ ಆರ್ ಪೇಟೆ: ತಾಲ್ಲೂಕು ಅಕ್ಕಿಹೆಬ್ಬಾಳು ಹೋಬಳಿಯ ಕಟ್ಟೆಕ್ಯಾತನಹಳ್ಳಿ, ಮಾಂಬಹಳ್ಳಿ, ಸೋಮನಾಥಪುರ ಗ್ರಾಮಗಳಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಚ್ ಟಿ ಮಂಜು ಅವರು ಭೂಮಿ ಪೂಜೆ ನೆರವೇರಿಸಿದರು.
.ಬಳಿಕ ಶಾಸಕ ಹೆಚ್.ಟಿ.ಮಂಜು ಅವರು ಮಾತನಾಡಿ ನಾನು ವಿರೋಧ ಪಕ್ಷದ ಶಾಸಕ ಹಾಗಾಗಿ ಕೇವಲ 25ಕೋಟಿ ಅನುಧಾನ ನೀಡಲಾಗುತ್ತಿದೆ. ಅದೇ ಕಾಂಗ್ರೆಸ್ ಶಾಸಕರಿಗೆ 50ಕೋಟಿ ಅನುಧಾನ ನೀಡಲಾಗುತ್ತಿದೆ. ಇದೂವರೆವಿಗೂ ತಾಲ್ಲೂಕಿನ ಸುಮಾರು 330 ಗ್ರಾಮಗಳಿಗೆ ತಲಾ 10 ಲಕ್ಷ ರೂಗಳಂತೆ ಅನುಧಾನ ನೀಡಿದ್ದೇನೆ. ಇನ್ನು 70 ಗ್ರಾಮಗಳು ಉಳಿದಿವೆ. ಆ ಗ್ರಾಮಗಳಿಗೆ ತಲಾ 10 ಲಕ್ಷ ರೂಪಾಯಿಗಳ ಅನುದಾನ ನೀಡುವ ಮೂಲಕ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಸಾಮಾಜಿಕ ನ್ಯಾಯ ನೀಡಿದ ಧನ್ಯತಾ ಭಾವನೆ ನನ್ನದಾಗಲಿದೆ.

ನಾನು ಈಗ ವಿರೋಧ ಪಕ್ಷದ ಶಾಸಕನಾಗಿದ್ದೇನೆ. 2028ಕ್ಕೆ ನಮ್ಮ ಎನ್.ಡಿ.ಎ ಮೈತ್ರಿ( ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕೂಡ) ಪಕ್ಷವು ಅಧಿಕಾರಕ್ಕೆ ಬರುವುದು ನೂರಕ್ಕೆ 100 ಸತ್ಯವಾಗಿದೆ. ಆಗ ತಾವು ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು. ನಾನು ಸಚಿವನಾಗಿ ನಿಮ್ಮ ಋಣ ತೀರಿಸುವ ಮೂಲಕ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಕನಿಷ್ಠ 3000 ಕೋಟಿ ರೂಪಾಯಿಗಳ ಅನುಧಾನವನ್ನು ತಂದು ಕೊಡುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಂಬಳ್ಳಿ ಅಶೋಕ್, ಟಿಎಪಿಸಿಎಂಎಸ್ ಕಾಂತರಾಜು, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಕೆ.ಟಿ.ಚಂದ್ರೇಗೌಡ, ನಿವೃತ್ತ ಮುಖ್ಯ ಶಿಕ್ಷಕ ಕೆ.ಟಿ.ರಾಮೇಗೌಡ, ಮಾಂಬಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನಿರ್ದೇಶಕರಾದ ತಿಮ್ಮೇಗೌಡ, ಕಾಂತರಾಜು, ಸೋಮನಹಳ್ಳಿ ಗ್ರಾ.ಪಂ. ಪಿಡಿಓ ರಾಮೇಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಅರಳಕುಪ್ಪೆ ಪಾಂಡು ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
