ರಾಮನಾಥಪುರ, ಆ.17: ಕರ್ನಾಟಕ ರಕ್ಷಣಾ ವೇದಿಕೆ ರಾಮನಾಥಪುರ ಹೋಬಳಿ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ರಾಮನಾಥಪುರ ಸರ್ಕಲ್ನಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಣನೂರು ಪೊಲೀಸ್ ಠಾಣೆಯ ಪಿಎಸ್ಐ ಮರಿಯಪ್ಪ ಆರ್. ಬ್ಯಾಳಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿ, ಅವರ ತ್ಯಾಗ ಹಾಗೂ ದೇಶಪ್ರೇಮವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನೂ ವಿಜೃಂಭಣೆಯಿಂದ ಆಚರಿಸಲಾಯಿತು. ರಾಯಣ್ಣ ಅವರ ದೇಶಪ್ರೇಮ, ಧೈರ್ಯ ಮತ್ತು ಬ್ರಿಟಿಷರ ವಿರುದ್ಧದ ಹೋರಾಟವನ್ನು ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಮನಾಥಪುರ ಹೋಬಳಿ ಅಧ್ಯಕ್ಷ ಪುಟ್ಟರಾಜು ಬಿ.ಸಿ., ಕೋನಾಪುರ ಅಧ್ಯಕ್ಷ ರಾಜೇಶ್, ರಾಮನಾಥಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದಿವ್ಯಾ ಬಿ.ಆರ್., ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕರು, ಸೈನಿಕರಾದ ಮಹೇಶ್, ಪುಟ್ಟರಾಜು ಬಿ.ಎಂ., ಆದರ್ಶ, ಕಾಂತರಾಜು, ಬೆಟ್ಟಸೋಗೆ ವೀರಭದ್ರ, ಮನೋಜ್, ಲಕ್ಕೇಗೌಡ, ಪರಮೇಶ್, ರವಿ, ಮಹೇಶ್, ಆರ್.ಕೆ. ಶ್ರೀನಿವಾಸ್, ಗೊಬ್ಬರದಂಗಡಿ ಸ್ವಾಮಿಗೌಡ, ಸ್ಟುಡಿಯೋ ಗುರಣ್ಣ, ಬೀರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಆರ್ಎನ್ಪಿ.
