ತುಮಕೂರು:ಆಗ್ನೇಯ ಪದವೀಧರ ಕ್ಷೇತ್ರದ 2026ರ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದು ಪದವೀಧರರ ಸಮಸ್ಯೆಗಳು ಏನು ಎಂಬುದನ್ನು ನಾನು ತಿಳಿದುಕೊಂಡಿದ್ದು ಕಳೆದ 30 ವರ್ಷಗಳಿಂದ ನಾನು ಶಿಕ್ಷಕನಾಗಿ ಸೇವೆ ಸಲ್ಲಿಸಿ ಈಗ ಸ್ವಯಂ ನಿವೃತ್ತಿ ಪಡೆದು ಈ ವರ್ಷ ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು ಎಲ್ಲ ಪದವೀಧರರು ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ನನ್ನನ್ನು ಭಾರೀ ಅಂತರದಿಂದ ಚುನಾಯಿಸಿ ಮೇಲ್ಮನೆಗೆ ಆರಿಸಿ ಕಳಿಸಬೇಕೆಂದು ಕೆ.ಜಿ.ರಂಗಸ್ವಾಮಿರವರು ಮನವಿ ಮಾಡಿದರು.
ಅವರು ತುಮಕೂರು ನಗರದ ಜಯನಗರ ಬಡಾವಣೆಯಲ್ಲಿ ಪದವೀಧರ ಮತದಾರರನ್ನು ಭೇಟಿ ಮಾಡಿ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮಾಡಿ ಮತದಾರರ ಮನವೊಲಿಸುತ್ತಿದ್ದಾರೆ,ಪದವೀಧರರು ರಾಜ್ಯದಲ್ಲಿ ಹಲವು ಸಮಸ್ಯೆಗಳ ಬಗ್ಗೆ ರಂಗಸ್ವಾಮಿರವರ ಗಮನ ಸೆಳೆದರು,ನಿರುದ್ಯೋಗ,ಖಾಲಿ ಹುದ್ದೆಗಳ ಭರ್ತಿ,ವಯೋಮಿತಿ ಸಡಿಲಿಕೆ,ರಾಜ್ಯದಲ್ಲಿರುವ ಬ್ಯಾಂಕ್, ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವ ಬಗ್ಗೆ,ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಶಿಕ್ಷಕರ ಅನೇಕ ಸಮಸ್ಯೆಗಳಿದ್ದು ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರಿಗೆ ಸರ್ಕಾರವೇ ಲ್ಯಾಪ್ ಟಾಪ್ ನೀಡಬೇಕು,ಮೊಟ್ಟೆಗೆ ಹೆಚ್ಚಿನ ಅನುದಾನ ನೀಡಬೇಕು,ಶಿಕ್ಷಕರ ಕೆಲಸದ ಒತ್ತಡ ಕಡಿಮೆ ಮಾಡಬೇಕು ಅವರ ಮೇಲೆ ಇರುವ ಹೊರೆ ಕಡಿತಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
– ಕೆ.ಬಿ.ಚಂದ್ರಚೂಡ
