ನವದೆಹಲಿ: ಭಾರತದ ಪ್ರಖ್ಯಾತ ಸೈದ್ಧಾಂತಿಕ ಭೌತವಿಜ್ಞಾನಿ ಪ್ರೊ. ದೀಪಕ್ ಧರ್ ಅವರಿಗೆ ಇಟಲಿಯ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಫಿಸಿಕ್ಸ್ (ICTP) ಸಂಸ್ಥೆಯ 2026ರ ಡಿರಾಕ್ ಪದಕ (Dirac Medal) ಘೋಷಿಸಲಾಗಿದೆ.
ಈ ಮೂಲಕ ಪ್ರತಿಷ್ಠಿತ ಡಿರಾಕ್ ಪದಕ ಪಡೆದ ಎರಡನೇ ಭಾರತೀಯ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪ್ರೊ. ದೀಪಕ್ ಧರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಭಾರತದ ಪ್ರಸಿದ್ಧ ಭೌತವಿಜ್ಞಾನಿ ಅಶೋಕ್ ಸೇನ್ ಅವರು 2014ರಲ್ಲಿ ಈ ಪದಕವನ್ನು ಪಡೆದ ಮೊದಲ ಭಾರತೀಯರಾಗಿದ್ದರು.
ಸೈದ್ಧಾಂತಿಕ ಭೌತವಿಜ್ಞಾನ ಕ್ಷೇತ್ರಕ್ಕೆ ಪ್ರೊ. ದೀಪಕ್ ಧರ್ ಅವರು ನೀಡಿರುವ ಮಹತ್ವದ ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಅವರ ಸಾಧನೆಯು ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಸಂಗತಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತದ ವೈಜ್ಞಾನಿಕ ಪ್ರತಿಭೆಗೆ ಮತ್ತೊಮ್ಮೆ ಮಾನ್ಯತೆ ದೊರೆತಂತಾಗಿದೆ.
