ರಾಮನಾಥಪುರ- ಸಮಾಜದಲ್ಲಿ ಸಾಮರಸ್ಯ ಶಾಂತಿ ವೃದ್ಧಿಯಾಗಬೇಕು ಎಂದರೆ ಅಧ್ಯಾತ್ಮ ಪ್ರಮುಖಪಾತ್ರ ವಹಿಸುತ್ತದೆ. ಭಕ್ತರು ಪ್ರತಿನಿತ್ಯ ಶ್ರದ್ಧಾ ಭಕ್ತಿಯಿಂದ ಪರಮಶಿವನ ಓಂಕಾರದೊಂದಿಗೆ ಜೀವನ ಪ್ರಾರಂಭಿಸಿದರೇ ಅತ್ಮಸೈರ್ಯ ವೃದ್ಧಿಸುತ್ತದೆ ಎಂದು ಬೆಂಗಳೂರು ವಿದ್ವಾನ್ ಕೇಶವಪ್ರಸಾದ್ ರವರು ತಿಳಿಸಿದರು.

ರಾಮನಾಥಪುರ ಕಾವೇರಿ ನದಿ ದಂಡೆಯಲ್ಲಿ ಹಾಗೂ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಶೃಂಗೇರಿ ಶ್ರೀ ಶಂಕರಮಠ ಶಾಖೆ ರಾಮನಾಥಪುರದ ಶ್ರೀ ಭಾರತೀತೀರ್ಥ ಕಲಾ ಭವನದಲ್ಲಿ ಜಗದ್ಗುರು ಶ್ರೀ ಶಂಕರಭಗವತ್ಪಾದರ ಜಯಂತಿ ಮಹೋತ್ಸವ 2 ನೇ ದಿವಸದಲ್ಲಿ ಬೆಂಗಳೂರು ವಿದ್ವಾನ್ ಕೇಶವಪ್ರಸಾದ್, ವಿದ್ವಾನ್ ಚಿಂತನಪಲ್ಲಿ ಶ್ರೀ ಮನೋಜ್ ಅವರು ರಾಗ ಸಂಯೋಜನೆ ಮತ್ತು ಶ್ಲೋಕ ಗಾಯನ ನೀಡಿದರು.

ರಾಮನಾಥಪುರ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಏಪ್ರಿಲ್ 21 ರಂದು ಮಂಗಳವಾರ ಸಂಜೆ 4-30 ಗಂಟೆಗೆ ಜಗದ್ಗುರು ಶ್ರೀ ಶಂಕರ ಭಗವಗವತ್ಪಾದರ ರಥೋತ್ಸವ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಶ್ರೀಮಠದ ವ್ಯವಸ್ಥಾಪಕರು ಕೊಣನೂರು ಗಣೇಶ್ ಮನವಿ ಮಾಡಿದರು.

ವರದಿ : ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
