ರಾಮನಾಥಪುರ (ಅರಕಲಗೂಡು): ಪೂರ್ವ ಪ್ರಾಥಮಿಕ ಶಿಕ್ಷಣದ ಬುನಾದಿ ವ್ಯವಸ್ಥೆಯಾದ “ಮಕ್ಕಳ ಮನೆ” ಪರಿಕಲ್ಪನೆ ಅರಕಲಗೂಡು ತಾಲೂಕಿನಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು, ಗ್ರಾಮೀಣ ಶಿಕ್ಷಣಕ್ಕೆ ಹೊಸ ದಿಕ್ಕು ನೀಡುತ್ತಿದೆ.
ಅರಕಲಗೂಡು ಶಾಸಕ A. Manju ಅವರ ಧರ್ಮಪತ್ನಿ ತಾರಾ ಮಂಜು ಅವರ ಪರಿಕಲ್ಪನೆಯ ಈ ಯೋಜನೆ ಗ್ರಾಮೀಣ ಮಕ್ಕಳಿಗೆ ಕಾನ್ವೆಂಟ್ ಮಾದರಿಯ ಶಿಕ್ಷಣವನ್ನು ನೀಡುವುದರ ಜೊತೆಗೆ ಚಟುವಟಿಕೆ ಆಧಾರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಪ್ರಸ್ತುತ ತಾಲೂಕಿನಾದ್ಯಾಂತ 19 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮನೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಾವಿರಾರು ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪೋಷಕರು ಹಾಗೂ ಗ್ರಾಮೀಣ ಜನರಿಂದ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಾಖಲಾತಿಗಾಗಿ ಪೋಷಕರು ಸ್ವಯಂಪ್ರೇರಿತವಾಗಿ ಸಂಪರ್ಕಿಸಿ ಹೆಸರು ನೋಂದಾಯಿಸುತ್ತಿರುವುದು ವಿಶೇಷವಾಗಿದೆ.

ಮಕ್ಕಳ ಮನೆಗಳಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಕಲಿಕಾ ಚಟುವಟಿಕೆಗಳು, ವಿಶೇಷ ದಿನಾಚರಣೆಗಳು, ಆಟಾಧಾರಿತ ಕಲಿಕೆ ಹಾಗೂ ಸಂಭ್ರಮಾತ್ಮಕ ಶಿಕ್ಷಣ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಇದರಿಂದ ಮಕ್ಕಳು ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಮಕ್ಕಳ ಮನೆ ಶಾಲೆಗಳ ದಾಖಲಾತಿ ಆಂದೋಲನ ನಡೆಯುತ್ತಿದ್ದು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 89704 22851
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
