ರಾಮನಾಥಪುರ – ಇಲ್ಲಿಯ ಇತಿಹಾಸ ಪ್ರಸಿದ್ದ ಶ್ರೀ ಪಟ್ಟಾಭಿರಾಮ ದೇವಾಲಯದ ಶ್ರೀ ಬ್ರಹ್ಮರಥೋತ್ಸವವು ವೈಖಾನಸ ಅಗಮೋಕ್ತ ರೀತ್ಯ ಸಾವಿರಾರು ಭಕ್ರರ ಸಮ್ಮುಖದಲ್ಲಿ ವಿಜೃಭಣೆಯಿಂದ ನಡೆಯಿತು.
ದಕ್ಷಿಣ ಕಾಶಿ ಎಂದೇ ರಾಮನಾಥಪುರದಲ್ಲಿ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದಲ್ಲಿ ನಡೆದ ಮಹಾರಥೋತ್ಸವದ ಪ್ರಯುಕ್ತ ಪುಪ್ಪಮಂಟಪೋತ್ಸವ ಪ್ರಹ್ನಾದಪರಿಪಾಲನೋತ್ಸವ ಸಿಂಹವಾಹನೋತ್ಸವ, ಸೀತಾರಾಮ ಕಲ್ಯಾಣೋತ್ಸವ ಗಜೇಂದ್ರಮೋಕ್ಷ, ಸಂಜನ ಗರುಡೋತ್ಸವ ಸೂರ್ಯಮಂಡಲೋತ್ಸವ ಉತ್ಸವಗಳು ಪ್ರತಿ ನಿತ್ಯ ನಡೆದವು.

ಪುರಾಣ ಪ್ರಸಿದ್ಧ ದೇವಾಲಯಗಳ ಬೀಡು
ಎನಿಸಿರುವ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರದ ಶ್ರೀ ಪಟ್ಟಾಭಿರಾಮಸ್ವಾಮಿ ಬ್ರಹ್ಮಮಹಾರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ನಡೆಯಿತು.
ಬ್ರಹ್ಮರಥೋತ್ಸವದ ಅಂಗವಾಗಿ ದೇಗುಲವು ವಿವಿಧ ರೀತಿಯ ಹೂಗಳಿಂದ ಅಲಂಕೃತಗೊಂಡಿತ್ತು. ಹಗಲು 12 ಗಂಟೆಗೆ ಸರಿಯಾಗಿ ಶ್ರೀ ಪಟ್ಟಾಭಿರಾಮಸ್ವಾಮಿ ದೇಗುಲದ ಮುಂಭಾಗದಲ್ಲಿ ನಿಲ್ಲಿಸಿ ವಿವಿಧ ಪುಪ್ಪಗಳಿಂದ ಹಾಗೂ ಬಗ್ಗೆ ಬಗೆಯ ವರ್ಣದ ಬಟ್ಟೆಗಳಿಂದ ಅಲಂಕರಿಸಿದ 45 ಅಡಿ ಎತ್ತರದ ರಥದಲ್ಲಿ ಉತ್ಸವ ಮೂರ್ತಿಯನ್ನುನ ಕುಳ್ಳಿರಿಸಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ವಿವಿಧ ಕಲಾತಂಡಗಳೊಂದಿಗೆ ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರ ಸಮಯದಲ್ಲಿ ಹಷ್ರೋದ್ವಾರದೊಂದಿಗೆ ಸಾಮೂಹಿಕವಾಗಿ ರಥವನ್ನು ಎಳೆಯುತ್ತಾ ದೇವಸ್ಥಾನದ ಮುಂಭಾಗದಿಂದ ಸುತ್ತ ರಥದ ಬೀದಿಯಲ್ಲಿ ತೆರಳಿ ಹಾಗೂ ಅಲ್ಲಿಂದ ಮತ್ತೆ ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ನಿಲ್ಲಿಸಿದರು. ಮುಖ್ಯ ಅರ್ಚಕರು ಶ್ರೀನಿವಾಸ್ ಪೂಜಾ ಕೈಂಕರ್ಯ ನರವೇರಿಸಿದರು.
