ರಾಮನಾಥಪುರ- ಗ್ರಾಮೀಣ ಪ್ರದೇಶದಲ್ಲಿರುವ ದೇವಾಲಯದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರಿಸಿ, ಧರ್ಮ, ಜಾತಿ, ಸಮಾನತೆಗೆ ನಾವೆಲ್ಲ ಶ್ರಮಿಸಬೇಕು ಎಂದು ಶ್ರೀಮಠದ ವ್ಯವಸ್ಥಾಪಕರು ಕನಕಾಚಾರ್ಯರು ತಿಳಿಸಿದರು.

ರಾಮನಾಥಪುರದ ಶ್ರೀ ಉತ್ತರಾಧಿಮಠದಲ್ಲಿ ಇಂದು ಗುರುವಾರ ಶ್ರೀ ರಾಘವೇಂದ್ರಸ್ವಾಮಿಗಳವರ ವಿಶೇಷ ಪೂಜೆ ಮಹಾ ಮಂಗಳಾರತಿ ನಂತರ ಅಶಿರ್ವಚನ ನೀಡಿದ ಅವರು ಧಾರ್ಮಿಕ ಕೇಂದ್ರಗಳು, ಅಥವಾ ದೇಗುಲಗಳು ತೆರೆದಂತೆಲ್ಲಾ ಧಾರ್ಮಿಕತೆ ಬೆಳೆಯುತ್ತ ಸಾಗುತ್ತಿದೆ. ಇಂತಹ ದೇಗುಲಗಳಿಗೆ ತೆರಳುವಾಗ ಹಣ್ಣು, ಕಾಯಿ, ಕೊಂಡೊಯ್ದು ದೇವರಿಗೆ ಪೂಜೆ ಸಲ್ಲಿಸುತ್ತೇವೆ. ಹಾಗೆಯೇ ಹಿಂದಿರುಗುವಾಗ ಅಲ್ಲಿ ಏನನ್ನಾದರೂ ಬಿಟ್ಟು ಬರುವುದು ನಮ್ಮ ಸಂಪ್ರದಾಯ. ಹಾಗಾಗಿ ದೇಗುಲದಲ್ಲಿ ಕೆಲಕಾಲ ಕುಳಿತು ಧ್ಯಾನಿಸಿ ಬಳಿಕ ಕೋಪ, ದೋಷ, ಅಹಂಕಾರ, ಹಾಗೂ ಕೆಟ್ಡ ಭಾವನೆಗಳನ್ನು ಅಲ್ಲಿಯೇ ಬಿಟ್ಟು ಬರುವುದನ್ನು ರೂಢಿಸಿಕೊಳ್ಳೋಣ. ದೇವಾಲಯ ಸ್ಥಾಪನೆಯಿಂದ ಧಾರ್ಮಿಕ ಪ್ರಜ್ಞೆ ಜಾಗೃತವಾಗುತ್ತದೆ ಎಂದು ಶ್ರೀಮಠದ ವ್ಯವಸ್ಥಾಪಕರು ಕನಕಾಚಾರ್ಯರು ಹೇಳಿದರು. ಒಂದಂತಹ ಭಕ್ತರುಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿದರು.

