ತುಮಕೂರು : ಮೇ 9ರಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಮೈದಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜನಸೇವೆಯಲ್ಲಿ ಸಾರ್ಥಕ 50ವರುಷ ಬಿಎಸ್.ವೈ.ಅಭಿಮಾನೋತ್ಸವಕ್ಕೆ ತುಮಕೂರು ಜಿಲ್ಲೆಯಿಂದ ಸುಮಾರು 1 ಸಾವಿರ ಬಸ್ ಗಳಲ್ಲಿ 50 ಸಾವಿರ ಜನ ಹೊರಡಲಿದ್ದಾರೆ,ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅವರವರ ಕಾರ್ ಗಳಲ್ಲಿ ಸಹ ಹೊರಡಲಿದ್ದಾರೆ, ಬಿ.ಎಸ್.ಯಡಿಯೂರಪ್ಪನವರು ಧಣಿವರಿಯದ ನಾಯಕ,ಈ ರಾಜ್ಯ ಕಂಡ ಮುತ್ಸದ್ಧಿ,ಜನಾನುರಾಗಿ,ನೀರಾವರಿ ಯೋಜನೆಗಳನ್ನು ರೂಪಿಸಿದವರು,ರೈತರಿಗಾಗಿ ಪ್ರತ್ಯೇಕ ಆಯವ್ಯಯ ನೀಡಿದವರು,ಭಾಗ್ಯ ಲಕ್ಷ್ಮಿ ಬಾಂಡ್ ನೀಡಿ ಹೆಣ್ಣುಮಕ್ಕಳ ಜೀವನ ರೂಪಿಸಿದವರು,ಮಧ್ಯಾಹ್ನ 2ಕ್ಕೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ,ಕಾರ್ಯಕ್ರಮವನ್ನು ಕೇಂದ್ರ ಗೃಹಸಚಿವ ಅಮಿತ್ ಷಾ ಉದ್ಘಾಟಿಸುವರು ಎಂದು ತಿಳಿಸಿದರು.
ಶಾಸಕ ಬಿ.ಸುರೇಶ್ ಗೌಡ ಮಾತನಾಡಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದರು,ಏತ ನೀರಾವರಿ ಇತರೆ ನೀರಾವರಿ ಯೋಜನೆಗಳಿಗೆ ಸುಮಾರು 600-900ಕೋಟಿ ಅನುದಾನ ನೀಡಿದ್ದಾರೆ,ರೈತರಿಗಾಗಿ ಪ್ರತ್ಯೇಕ ಟ್ರಾನ್ಸ್ ಫಾರಮ್ ನೀಡಿದ್ದಾರೆ,ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಜನರ ಕಲ್ಯಾಣಕ್ಕಾಗಿ ದುಡಿದಿದ್ದಾರೆ,ಪುರಸಭೆ ಸದಸ್ಯರಿಂದ ಹಿಡಿದು ಮುಖ್ಯಮಂತ್ರಿ ಆಗುವವರೆಗೂ ಅವರ ಶ್ರಮ ದೊಡ್ಡದು ಬಿಜೆಪಿಯನ್ನು ಕಟ್ಟಿ ಬೆಳೆಸಿ ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದಾರೆ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಿ ಅನೇಕರನ್ನು ಬೆಳೆಸಿದ್ದಾರೆ,ಹೆಣ್ಣುಮಕ್ಕಳಿಗೆ ಪ್ರಪ್ರಥಮ ಬಾರಿಗೆ ಸೈಕಲ್ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದಾರೆ, ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದಾರೆ, 2028ರಲ್ಲಿ ಬಿಜೆಪಿ 150 ಸೀಟು ಗೆದ್ದು ತನ್ನ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಜಯ್ ಕುಮಾರ್, ಜಿಲ್ಲಾ ಬಿಜೆಪಿ ಮಾಧ್ಯಮ ಸಂಯೋಜಕರಾದ ಜೆ.ಜಗದೀಶ್, ಸಹ ಸಂಯೋಜಕರಾದ ಮರಿತಿಮ್ಮಯ್ಯ, ವೈ.ಹೆಚ್.ಹುಚ್ಚಯ್ಯ, ವೇದಮೂರ್ತಿ ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
