ತುಮಕೂರು:ದೇಶದ ಸಂಗೀತ ಕ್ಷೇತ್ರಕ್ಕೆ ಎಸ್.ಜಾನಕಿ ಅಮ್ಮನ ಕೊಡುಗೆ ಅಪಾರವಾದುದು ಸುಮಾರು 17 ಭಾಷೆಗಳಲ್ಲಿ,48 ಸಾವಿರ ಹಾಡುಗಳನ್ನು ಹಾಡಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು ಎಸ್.ಜಾನಕಿ,ಹಿನ್ನಲೆ ಗಾಯಕಿಯಾಗಿ ಸುಮಾರು 4ದಶಕಗಳ ಕಾಲ ಸಂಗೀತ ರಸಿಕರನ್ನು ತನ್ನ ಹಾಡುಗಳ ಮೂಲಕ ರಂಜಿಸುತ್ತಾ ಸಂಗೀತ ಸರಸ್ವತಿಯ ಸೇವೆಯನ್ನು ಮಾಡುತ್ತಾ ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯವಾದುದು,ಭಾರತೀಯರಾದ ನಾವುಗಳು ಎಸ್.ಜಾನಕಿಯಂತವರನ್ನು ಪಡೆದಿದ್ದಕ್ಕೆ ಹೆಮ್ಮ ಪಡಬೇಕು ಎಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ರಿ)ನ ಅಧ್ಯಕ್ಷರಾದ ಟಿ.ಎಸ್.ಮೋಹನ್ ಕುಮಾರ್ ರವರು ತಿಳಿಸಿದರು.
ಅವರು ಇಂದು ಜಯನಗರ ಪಶ್ಚಿಮ ಬಡಾವಣೆಯಲ್ಲಿರುವ ಶ್ರೀಬನಶಂಕರಿ ದೇವಾಲಯದ ಆವರಣದಲ್ಲಿ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ರಿ) ಮತ್ತು ನಿರ್ಭಯ ಮಹಿಳಾ ಜಾಗೃತಿ ವೇದಿಕೆ(ರಿ) ಜಂಟಿಯಾಗಿ ಆಯೋಜಿಸಿದ್ದ ದಿವಂಗತ ಎಸ್.ಜಾನಕಿ ಸ್ವರನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ನಿರ್ಭಯ ಮಹಿಳಾ ಜಾಗೃತಿ ವೇದಿಕೆ(ರಿ)ಯ ಅಧ್ಯಕ್ಷರಾದ ಶ್ರೀಮತಿ ಗೀತಾನಾಗೇಶ್ ರವರು ಎಸ್.ಜಾನಕಿರವರು ಸಂಗೀತ ಕ್ಷೇತ್ರದಲ್ಲಿ ಗಳಿಸಿದ ಕೀರ್ತಿ ಅಪಾರವಾದುದು ಹಿರಿಯರಿಗೆ ಅವರು ನೀಡುತ್ತಿದ್ದ ಗೌರವ,ಸಂಸ್ಕಾರ ದೊಡ್ಡದು,ಅವರು ಎಷ್ಟೇ ಎತ್ತರಕ್ಕೆ ಏರಿದರೂ ಸಹ ಎಲ್ಲರೊಂದಿಗೆ ಸಾಮಾನ್ಯರಾಗಿ ಬೆರೆಯುತ್ತಿದ್ದರು,ಅವರ ಕಂಠಕ್ಕೆ ಮನಸೋಲದೆ ಇರುವವರು ಯಾರೂ ಇಲ್ಲ ಅಂತಹ ಅದ್ಭುತ ಕಂಠ ಅವರದ್ದು,ನಿಜಕ್ಕೂ ಅವರ ಸಂಸ್ಕಾರ ದೊಡ್ಡದು,ಅವರು ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಯುವ ಪೀಳಿಗೆ ಮುಂದುವರೆಯಬೇಕು,ಎಸ್.ಜಾನಕಿ ನಿಜಕ್ಕೂ ಸರಸ್ವತಿಯ ವರಪುತ್ರಿ,ಅಸಂಖ್ಯಾತ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ,ಅವರ ಹೆಸರಿನಲ್ಲಿ ಇಂದು ನಡೆಯುತ್ತಿರುವ ಸಂಗೀತ ಸಂಜೆ ನಿಜಕ್ಕೂ ಅದ್ಭುತ,ಅವರ ಒಂದೊಂದು ಹಾಡುಗಳು ಸಮಾಜಕ್ಕೆ ಜೀವನಕ್ಕೆ ಹತ್ತಿರವಾದುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಭಕ್ತವತ್ಸಲ, ಜಲಜಜೈನ್,ಝೀಟಿವಿ ಸರಿಗಮಪ ಖ್ಯಾತಿಯ ಕುಸುಮಜೈನ್, ಲತಾನಾರಾಯಣ್,ಶೈಲಜವೆಂಕಟೇಶ್, ಜ್ಯೋತಿಆಚಾರ್ಯ, ಶ್ರೀಮತಿ ನಂದಿನಿ, ರುದ್ರಮೂರ್ತಿಎಲೆರಾಂಪುರ, ಅಂಬಿಕ, ಚೇತನ್ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
