ಬೆಂಗಳೂರು, 21 ಆಗಸ್ಟ್ 2026: ತಿಂಗಳುಗಳಿಂದ ಸಂಗೀತ ಪ್ರಿಯರನ್ನು ರಂಜಿಸುತ್ತಿರುವ ಜೀ ಕನ್ನಡದ ಜನಪ್ರಿಯ ಶೋ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಇದೀಗ ಅಂತಿಮ ಘಟ್ಟ ತಲುಪಿದ್ದು, ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಗಳು ಪರಸ್ಪರ ಪೈಪೋಟಿ ನಡೆಸಲಿದ್ದು, ಇದೇ ಆಗಸ್ಟ್ 22 ಮತ್ತು 23ರಂದು ಸಂಜೆ 7 ಗಂಟೆಗೆ ಎರಡು ದಿನಗಳ ಕಾಲ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಕರ್ನಾಟಕದ ವಿವಿಧ ಭಾಗಗಳಿಂದ ಬಂದಿರುವ ಪುಟ್ಟ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಈ ಶೋ, ಸ್ಪರ್ಧಿಗಳ ಅದ್ಭುತ ಧ್ವನಿ, ಮುಗ್ಧತೆ, ಆತ್ಮವಿಶ್ವಾಸ ಹಾಗೂ ಸಂಗೀತದ ಮೇಲಿನ ಆಸಕ್ತಿಯಿಂದ ಪ್ರೇಕ್ಷಕರ ಮನ ಗೆದ್ದಿದೆ. ಈ ಸುಂದರ ಪಯಣದಲ್ಲಿ ಪುಟ್ಟ ಗಾಯಕರಿಗೆ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮಾರ್ಗದರ್ಶನ ನೀಡಿದ್ದಾರೆ. ಮೊದಲ ಆಡಿಷನ್ನಿಂದ ಹಿಡಿದು ಅಂತಿಮ ಘಟ್ಟದವರೆಗೆ ಸ್ಪರ್ಧಿಗಳು ತಮ್ಮ ಪ್ರತಿಭೆಯ ಮೂಲಕ ಪ್ರೇಕ್ಷಕರನ್ನು ನಿರಂತರವಾಗಿ ರಂಜಿಸುತ್ತಾ, ಅವರ ಮನ ಗೆಲ್ಲುತ್ತಾ ಬಂದಿದ್ದಾರೆ.
ಬಹು ನಿರೀಕ್ಷಿತ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗಿದ್ದು, ಅಶ್ಮಿತ್, ಅಚಿಂತ್ಯ, ಮಹನ್ಯಾ, ಹರುಷ್, ಜಯಲಕ್ಷ್ಮಿ ಮತ್ತು ಅವ್ಯುಕ್ತ್ ಅವರು ಚಾಂಪಿಯನ್ ಪಟ್ಟಕ್ಕಾಗಿ ಅಂತಿಮ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ. ತಮ್ಮ ಅದ್ಭುತ ಗಾಯನದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಈ ಆರು ಪ್ರತಿಭೆಗಳು, ಫಿನಾಲೆಯಲ್ಲಿ ಮತ್ತೊಮ್ಮೆ ವಿಶೇಷ ಪ್ರದರ್ಶನಗಳ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ. ಅದ್ಧೂರಿ ಪ್ರದರ್ಶನಗಳು, ಭಾವನಾತ್ಮಕ ಕ್ಷಣಗಳು, ವಿಶೇಷ ಸರ್ಪ್ರೈಸ್ಗಳು ಮತ್ತು ಸಂಭ್ರಮದಿಂದ ಕೂಡಿರುವ ಈ ಗ್ರ್ಯಾಂಡ್ ಫಿನಾಲೆ, ಸ್ಪರ್ಧಿಗಳ ಪಯಣಕ್ಕೆ ಅದ್ಧೂರಿ ಹಾಗೂ ಮರೆಯಲಾಗದ ಅಂತ್ಯವನ್ನು ನೀಡಲಿದೆ.
ಈ ಆರು ಪ್ರತಿಭೆಗಳಲ್ಲಿ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಚಾಂಪಿಯನ್ ಪಟ್ಟವನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವೀಕ್ಷಿಸಿ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’, ಇದೇ ಆಗಸ್ಟ್ 22 ಮತ್ತು 23ರಂದು ಸಂಜೆ 7 ಗಂಟೆಗೆ ನಿಮ್ಮ ಜೀ ಕನ್ನಡದಲ್ಲಿ.
