ಟಿ.ನರಸೀಪುರ : ಜ : 31ಶನಿವಾರದಂದು ಮುಡುಕುತೊರೆಯಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಶ್ರೀ ನಾಡು ಮಠದಲ್ಲಿ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಡುಕುತೊರೆಯಲ್ಲಿ ಶ್ರೀ ಭ್ರಮರಾಂಬಾಸಮೇತ ಶ್ರೀ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಜನವರಿ 31ರಂದು ಶನಿವಾರ ತೆಪ್ಪೋತ್ಸವದಂದು, ಸಂಜೆ 6.00 ಗಂಟೆಗೆ ಶ್ರೀ ಸುತ್ತೂರು ನಾಡುಮಠದಲ್ಲಿ ಸುತ್ತೂರು ಶಾಲೆಯ ಸಂಗೀತ ಶಿಕ್ಷಕರು ಮತ್ತು ಮಕ್ಕಳಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನಂತರ ಪ್ರಸಾದದ ವ್ಯವಸ್ಥೆ ಇರುತ್ತದೆ.ಮುಡುಕುತೊರೆಗೂ ಸುತ್ತೂರು ಶ್ರೀಮಠಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಬೆಟ್ಟದ ತಪ್ಪಲಿನಲ್ಲಿ ಶ್ರೀ ಮಠದ ಶಾಖಾಮಠವಿದ್ದು, ನಾಡುಮಠವೆಂದು ಖ್ಯಾತಿ ಪಡೆದಿದೆ.
ಹಿಂದಿನಿಂದಲೂ ಸುತ್ತೂರು ಶ್ರೀ ಮಠದಿಂದ ತೆಪ್ಪೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಸಭೆ ಹಾಗೂ ದಾಸೋಹದ ವ್ಯವಸ್ಥೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿರುವ ಕಾರಣ ಈ ವರ್ಷವೂ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದ್ದು,
ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ವ್ಯವಸ್ಥಾಪಕರು ಕೋರಿದ್ದಾರೆ.
– ಎಂ. ನಾಗೇಂದ್ರ ಕುಮಾರ್
