ಮಂಗಳೂರು: ಭಾರತದ ಮುಂಚೂಣಿ ವ್ಯಾಪಾರ ಆಟೊಮೇಶನ್ ಸಾಫ್ಟ್ವೇರ್ ಸರಬರಾಜುದಾರ ಸಂಸ್ಥೆಯಾದ ಟ್ಯಾಲಿ ಸಲ್ಯೂಶನ್ಸ್ ಪ್ರೈ ಲಿ., ಇಂದು ಐದು ವರ್ಷಗಳ ಟ್ಯಾಲಿ ಪ್ರೈಮ್ ವೇದಿಕೆಯನ್ನು ಆಚರಿಸುತ್ತಿದೆ. ತಾನು ಟ್ಯಾಲಿಪ್ರೈಮ್ ರಿಲೀಸ್ 7 ಸ್ಥಾಪನೆಗೊಂಡಾಗಿನಿಂದಲೂ ಟ್ಯಾಲಿ ಪ್ರೈಮ್ ಒಂದು ಸ್ಪಷ್ಟವಾದ ಭರವಸೆಯ ಸುತ್ತ ವಿನ್ಯಾಸಗೊಂಡಿದೆ-ಅದು, ಎಮ್ಎಸ್ಎಮ್ಇಗಳಿಗಾಗಿ ಡಿಜಿಟೀಕರಣವನ್ನು ಸರಳ, ವಿಶ್ವಸನೀಯ ಹಾಗೂ ನಿಜವಾಗಿಯೂ ಉಪಯುಕ್ತಗೊಳಿಸುವುದು.
ಈ ಮೈಲಿಗಲ್ಲಿನ ಬಿಡುಗಡೆಯು, ಹೆಚ್ಚು ಆಳವಾದ ಸಂಯೋಜನೆಗಳು, ಇನ್ನೂ ಹೆಚ್ಚು ಸ್ಮಾರ್ಟ್ ಆದ ಆಟೋಮೇಶನ್ ಮತ್ತು ಅರ್ಥಪೂರ್ಣ ಡೇಟಾ-ರಕ್ಷಣೆ ವರ್ಧನೆಗಳನ್ನು ಒಟ್ಟುಗೂಡಿಸಿ ಅವುಗಳನ್ನು ಹೆಚ್ಚು ಏಕೀಕೃತ, ಸಂಪರ್ಕಗೊಂಡ ಅನುಭವವನ್ನಾಗಿ ಪರಿವರ್ತಿಸಿದೆ.
ಈ ಮೈಲಿಗಲ್ಲಿನ ಬಗ್ಗೆ ಮಾತನಾಡುತ್ತಾ, ಟ್ಯಾಲಿ ಸಲ್ಯೂಶನ್ಸ್ದ ವ್ಯವಸ್ಥಾಪಕ ನಿರ್ದೇಶಕ ತೇಜಸ್ ಗೋಯೆಂಕ ,“ಕಳೆದ ಐದು ವರ್ಷಗಳಿಂದ ಟ್ಯಾಲಿಪ್ರೈಮ್, ತನ್ನ ಸಂಪರ್ಕಗೊಂಡ ಸಾಮರ್ಥ್ಯಗಳನ್ನು ನಿಧಾನವಾಗಿ ವಿಸ್ತರಿಸಿ, ವ್ಯಾಪಾರ ಸಂಸ್ಥೆಗಳು, ಅನುಸರಣೆ, ಬ್ಯಾಂಕಿಂಗ್ ಮತ್ತು ಪ್ರತಿದಿನದ ಕಾರ್ಯಾಚರಣೆಗಳನ್ನು ನಡೆಸುವ ವಿಧಾನವನ್ನು ವರ್ಧಿಸಿದೆ. ಟ್ಯಾಲಿಪ್ರೈಮ್ 7.0 ಈ ಪಯಣದ ಸಹಜ ವಿಸ್ತರಣೆಯಾಗಿದ್ದು, ಹೆಚ್ಚು ಸ್ಮಾರ್ಟ್ ಆದ ಯಾಂತ್ರೀಕರಣ, ಹೆಚ್ಚು ಆಳವಾದ ಸಂಯೋಜನೆಗಳು ಹಾಗೂ ವರ್ಧಿತ ಖಾಸಗಿತ್ವ ಅಂಶಗಳನ್ನು ಪರಿಚಯಿಸುತ್ತದೆ.
ಇದು, ಇಂದಿನ ವ್ಯಾಪಾರ ಸಂಸ್ಥೆಗಳಿಗೆ ಸಂಪರ್ಕಗೊಂಡ ಡಿಜಿಟೀಕರಣವು ಅಗತ್ಯವೇ ಹೊರತು ಸಂಕೀರ್ಣತೆಯಲ್ಲ ಎಂಬ ನಮ್ಮ ನಂಬಿಕೆಯನ್ನು ಪ್ರತಿಫಲಿಸುತ್ತದೆ. ಈ ಬಿಡುಗಡೆಯು ನಾವು ನಿರ್ಮಾಣಮಾಡುತ್ತಲಿರುವ ಪರಿಸರವ್ಯವಸ್ಥೆಯನ್ನು ಬಲಪಡಿಸಿ, ವ್ಯಾಪಾರ ಸಂಸ್ಥೆಗಳು ಹೆಚ್ಚು ನಿರಂತರತೆ, ಪಾರದರ್ಶಕತೆ ಹಾಗೂ ಆತ್ಮವಿಶ್ವಾಸದೊಂದಿಗೆ ಕಾರ್ಯಾಚರಣೆ ನಡೆಸಲು ನೆರವಾಗುತ್ತದೆ.” ಎಂದು ಹೇಳಿದರು.
– ಕೆ.ಬಿ.ಚಂದ್ರಚೂಡ
