ಕೊರಟಗೆರೆ :- ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ನೂತನ ಜಿಲ್ಲಾ ಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರಯಡಿಯೂರಪ್ಪ ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ ಎಂದು ಕೊರಟಗೆರೆ ಬಿಜೆಪಿ ಮುಖಂಡ ಬಿ.ಹೆಚ್. ಅನಿಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಜಿಲ್ಲಾ ಮೊರ್ಚ ಯುವ ಅಧ್ಯಕ್ಷ, ಜಿಲ್ಲಾ ಮಹಿಳಾ ಮೊರ್ಚ, ಓಬಿಸಿ ಮೋರ್ಚಾ, ರೈತ ಮೋರ್ಚ, ಎಸ್ಸಿ ಮೋರ್ಚ, ಎಸ್ ಟಿ ಮೊರ್ಚ, ಅಲ್ಪಸಂಖ್ಯಾತರ ಮೋರ್ಚಾ, ಜಿಲ್ಲಾ ವಕ್ತಾರ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ, ಪ್ರಕೋಷ್ಟಗಳ ಜಿಲ್ಲಾ ಸಂಯೋಜಕ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ವಿಧಾನಪರಿಷತ್ ಶಾಸಕ ಚಿದಾನಂದ.ಎಂ.ಗೌಡ ನೇತೃತ್ವದಲ್ಲಿ ಕೊರಟಗೆರೆ, ಮಧುಗಿರಿ, ಶಿರಾ ಮತ್ತು ಪಾವಗಡ ತಾಲೂಕಿನ ವಿವಿಧ ಮೋರ್ಚ ಆಯ್ಕೆ ಪ್ರಕ್ರಿಯೆಯು ಜೂ.26ರಂದು ನಡೆದಿತ್ತು. ಆಯ್ಕೆ ವಿಚಾರದಲ್ಲಿ ಗೊಂದಲ ಇರುವ ಕಾರಣ ತಾತ್ಕಾಲಿಕ ಸ್ಥಗೀತ ಮಾಡುವಂತೆ ಮತ್ತೊಂದು ಮಧುಗಿರಿಯ ಬಿಜೆಪಿ ನಿಯೋಗದ ಮನವಿಯು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಲ್ಲಿಸಿತ್ತು.
ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಯಾವುದೇ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಮುಖಂಡರಿಗೆ ಈಗಾಗಲೇ ಸೂಚಿಸಿದ್ದಾರೆ.
ಬಿನ್ನಾಭಿಪ್ರಾಯ ಏನೇ ಇದ್ದರೂ ಜು.10ರಂದು ಸಭೆ ನಡೆಸಿ ಬಗೆ ಹರಿಸಿ ಜಿಲ್ಲಾ ಮೋರ್ಚ ಪದಾಧೀಕಾರಿಗಳ ಆಯ್ಕೆ ಮಾಡುವಂತೆ ಜಿಲ್ಲಾ ಪ್ರಭಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದರು.
– ಶ್ರೀನಿವಾಸ್ ಕೊರಟಗೆರೆ.
