ಬೇಲೂರು – ನಗರದಲ್ಲಿ ಕಳೆದ ಹತ್ತು ದಿನಗಳಿಂದ ಬೇಲೂರು ಶ್ರೀ ಚನ್ನಕೇಶ್ವರ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು ಇಂದು 10:30 ರಿಂದ 11 ಗಂಟೆಯ ಮಿಥುನ ಲಗ್ನ ಶುಭ ಆರಂಭದಲ್ಲಿ ಸಲ್ಲುವ ಅಮೃತಗಳಿಗೆಯಲ್ಲಿ ಐತಿಹಾಸಿಕ ಬ್ರಹ್ಮ ರಥೋತ್ಸವ ಗಳಿಗೆ ತೇರು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು ಜಿಲ್ಲೆ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ಶ್ರೀ ಚನ್ನಕೇಶವ ಸ್ವಾಮಿಯ ಗಳಿಗೆ ತೇರನ್ನು ಕಣ್ತುಂಬಿ ಕೊಂಡರು.
ಶ್ರೀ ಚನ್ನಕೇಶವ ಸ್ವಾಮಿಯನ್ನು ಪುಷ್ಪಲಂಕಾರಗಳಿಂದ ಶೃಂಗರಿಸಿ ನಂತರ ವಿಧಿ ವಿಧಾನಗಳ ಪೂಜೆ ನೆರವೇರಿಸಿ ರಾಜಗೋಪುರದ ಮಹಾದ್ವಾರದಿಂದ ಶ್ರೀ ಚನ್ನಕೇಶ ಸ್ವಾಮಿಯನ್ನು ಪುಷ್ಪಾಲಂಕಾರಗಳಿಂದ ಶೃಂಗರಿಸಿದ ಭವ್ಯ ರಥವರಲ್ಲಿ ಪ್ರತಿಷ್ಠಾಪಿಸಿ ನಾಡಿನಲ್ಲಿ ಮಳೆ ಬೆಳೆ ನಾಡಿನ ಜನತೆಗೆ ಆರೋಗ್ಯ ಶಾಂತಿ ನೆಮ್ಮದಿ ವೃದ್ಧಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಿ, ನಂತರ ಸಾಂಪ್ರದಾಯದಂತೆ ನಾಡಗೌಡರು ಕಹಳೆ ವಾದ್ಯ ಡೊಳ್ಳು ಕುಣಿತ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಆಗಮಿಸಿ ಶ್ರೀ ಚನ್ನಕೇಶವ ಸ್ವಾಮಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಜಾತ್ರಾ ಮಹೋತ್ಸವಕ್ಕೆ ಪೊಲೀಸ್ ಇಲಾಖೆಯಿಂದ ಸುಮಾರು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿ ಜಾತ್ರೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಕ್ಷಣಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿ ಪೊಲೀಸ್ ಸರ್ಪ ಸರ್ಪಗಾವಲುನಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿತ್ತು ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಿಂದ ಭಕ್ತರಿಗಾಗಿ ವಿಶೇಷ ಬಸ್ ವ್ಯವಸ್ಥೆ ಪುರಸಭೆಯಿಂದ ಕುಡಿಯುವ ನೀರು ಕಸದ ತೊಟ್ಟಿ ಭಕ್ತರಿಗೆ ಅರಿಕೆ ಮೂಡಿ ತೀರಿಸಿದ ನಂತರ ಸ್ನಾನಕ್ಕೆ ಸ್ಥಾನದ ಕೊಠಡಿ ಮೊಬೈಲ್ ಶೌಚಾಲಯ ಸ್ವಚ್ಛತೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಅನ್ನಪ್ರಸಾದ ವಿನಿಯೋಗ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಜಿಲ್ಲಾಡಳಿತ ಮತ್ತು ಸ್ಥಳೀಯ ಪುರಸಭೆಯಿಂದ ಈ ಬಾರಿ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗಿತ್ತು.

ಇದೇ ಸಂದರ್ಭದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್.ಹಾಸನ ಜಿಲ್ಲಾ ಅಧಿಕಾರಿ ಸತ್ಯಭಾಮ . ಮಾಜಿ ಸಚಿವ ರೇವಣ್ಣ.ಹಾಸನ ಆಡಳಿತ ಅಧಿಕಾರಿ ಶಾಂತಲಾ. ತಾಲೂಕು ದಂಡಾಧಿಕಾರಿ ಎಂ.ಮಮತಾ. ಪುರಸಭೆ ಅಧ್ಯಕ್ಷ ಎ .ಅರ್ ಅಶೋಕ್ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಯೋಗೇಶ್. ವೃತ್ತ ನಿರೀಕ್ಷಕ ರೇವಣ್ಣ. ಹಾಜರಿದ್ದರು.
