ತುಮಕೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರವರ ಅಧ್ಯಕ್ಷತೆಯಲ್ಲಿ ನಡೆದ 57ನೇ ಜಿಎಸ್ಟಿಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ಕೆಲವು ನಿರ್ಣಯಗಳು ಹಾಗೂ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ವಿಪುಲ್ ಬನ್ಸಾಲ್ ಅವರು ನೋಟಿಸ್ ಹಿಂಪಡೆಯುವ ಬಗ್ಗೆ ಮಾಹಿತಿ ವ್ಯಕ್ತಪಡಿಸಿರುವ ಬಗ್ಗೆ ಟಿ.ಜೆ.ಗಿರೀಶ್ ಟಿಡಿಸಿಸಿಐ ನಿಕಟಪೂರ್ವ ಅಧ್ಯಕ್ಷರು,ಜಿಲ್ಲಾ ಆಟೋಮೊಬೈಲ್ಸ್ ಡೀಲರ್ಸ್ ಕಾರ್ಯದರ್ಶಿಯಾದ ಟಿ.ಜೆ.ಗಿರೀಶ್ ಸ್ವಾಗತಿಸಿದ್ದಾರೆ.
ಸಭೆಯ ತೀರ್ಮಾನದಂತೆ ಬಂಧನ ಅಧಿಕಾರಗಳನ್ನು ರದ್ದುಗೊಳಿಸುವುದು, ಜಿಎಸ್ಟಿ ಚೌಕಟ್ಟಿನಡಿಯಲ್ಲಿ ತೆರಿಗೆ ಅಧಿಕಾರಿಗಳಿಗೆ ಬಂಧನದ ಅಧಿಕಾರವನ್ನು ತೆಗೆದು ಹಾಕಲು ಕೌನ್ಸಿಲ್ ಅನುಮೋದನೆ ನೀಡಿದೆ.ಹೆಚ್ಚಿನ ಪ್ರಾಸಿಕ್ಯೂಷನ್ ಮಿತಿ, ಕ್ರಿಮಿನಲ್ ಮೊಕದ್ದಮೆ ಹೂಡಲು ಹಣಕಾಸಿನ ಮಿತಿಯನ್ನು ಒಂದು ಕೋಟಿಯಿಂದ 5 ಕೋಟಿ ರೂ.ಗೆಹೆಚ್ಚಿಸಲಾಗಿದೆ. ದಂಡ ಕಡಿತಗಳು, ಯಾವುದೇ ನಿರ್ದಿಷ್ಟ ದಂಡವನ್ನು ಸೂಚಿಸದ ಸಾಮಾನ್ಯದಂಡವನ್ನು25,000ರಿAದ 10,000 ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ.
*ವೇಗದ ಮರು ಪಾವತಿ ಪ್ರಕ್ರಿಯೆ:*
ಮರುಪಾವತಿ ಹಕ್ಕುಗಳನ್ನು ಸ್ವೀಕರಿಸುವ ಸಮಯವನ್ನು 15 ದಿನಗಳಿಂದ 10 ದಿನಗಳಿಗೆ ಇಳಿಸಲಾಗಿದೆ. ಹಾಗೂ ಸ್ವೀಕೃತಿಯ ಮೂರು ಕೆಲಸದ ದಿನಗಳಲ್ಲಿಅಪಾಯದ ಮೌಲ್ಯಮಾಪನದಆಧಾರದ ಮೇಲೆ ಶೇಕಡ 90ರಷ್ಟುಅರ್ಹ ಮರುಪಾವತಿ ಹಕ್ಕುಗಳನ್ನು ಸ್ವಯಂಚಾಲಿತವಾಗಿ ತೆರವುಗೊಳಿಸಲಾಗುತ್ತದೆ. ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ಬಹು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಸಣ್ಣ ಮಾರಾಟಗಾರರಿಗೆ ಸರಳೀಕೃತ ನೋಂದಣಿ ಪ್ರಕ್ರಿಯೆಗಳನ್ನು ಪರಿಚಯಿಸಲಾಯಿತು. ಅಪ್ಸ್ಟಿಮ್ ಪೂರೈಕೆದಾರರು ತೆರಿಗೆಯನ್ನು ಪಾವತಿಸಲು ವಿಫಲವಾದರೆ ನಿಜವಾದ ಖರೀದಿದಾರರು ಇನ್ಪುಟ್ ತೆರಿಗೆ ಕ್ರೆಡಿಟ್ ಕಳೆದುಕೊಳ್ಳದಂತೆ ರಕ್ಷಿಸಲು ತಿದ್ದುಪಡಿಗಳನ್ನು (ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್162 ಸಿ ಅಡಿಯಲ್ಲಿ) ಪರಿಚಯಿಸಲಾಗಿದೆ ಎಂದು ಟಿ.ಜಿ.ಗಿರೀಶ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಮುಚ್ಚಿದ ಪ್ರಕರಣಗಳಲ್ಲಿ ಮರು ಜಿಎಸ್ಟಿ ನೋಟಿಸ್ಗಳನ್ನು ಹಿಂಪಡೆಯಲು ನಿರ್ಧಾರ ಈಗಾಗಲೇ ಲೆಕ್ಕಪರಿಶೋಧನೆ ನಡೆದು ಮುಚ್ಚಲಾಗಿರುವ ಪ್ರಕರಣಗಳಲ್ಲಿ ಹೊಸದಾಗಿ ನೀಡಲಾದ ಜಿಎಸ್ಟಿ ನೋಟಿಸ್ಗಳನ್ನು ಹಿಂಪಡೆಯಲುಕ್ರಮ ಕೈಗೊಳ್ಳಲಾಗುವುದು, ಒಂದು ವೇಳೆ ಬಾಧಿತ ವ್ಯವಹಾರಗಳು ತಮ್ಮ ಗಮನಕ್ಕೆ ತಂದರೆ, ಎಂದುಕರ್ನಾಟಕ ಸರ್ಕಾರದ ವಾಣಿಜ್ಯತೆರಿಗೆಆಯುಕ್ತ ವಿಪುಲ್ ಬನ್ಸಾಲ್ತಿಳಿಸಿದ್ದಾರೆ.
– ಚಂದ್ರಚೂಡ ಕೆ.ಬಿ.
