ಕಾರ್ಯಾಗಾರಕ್ಕೆ ಸಂಬಂಧಿಸಿದಂತೆ ಖಾಸಗಿ ಹೊಟೇಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು,ತುಮಕೂರು ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯುವ ಎರಡು ದಿನಗಳ ಕಾರ್ಯಾಗಾರಕ್ಕೆ ಜಿಲ್ಲೆಯ ಡಿಪ್ಲಮೋ ಪದವಿ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ನಿರುದ್ಯೋಗಿ ಯುವಜನರು ಪಾಲ್ಗೊಂಡು ತಜ್ಞರಿಂದ ಮಾಹಿತಿ ಪಡೆಯಬಹುದಾಗಿದೆ ಎಂದರು.
ಜಯನಗರದಲ್ಲಿರುವ ನಮ್ಮ ಗೃಹ ಕಚೇರಿಗೆ ದಿನಕ್ಕೆ ಹಲವು ಪದವಿಧರರು ಉದ್ಯೋಗದ ನಿಮಿತ್ತ ಶಿಫಾರಸ್ಸು ಪತ್ರಕ್ಕೆ ಬರುತ್ತಾರೆ.ಅವರಲ್ಲಿ ಬಹುತೇಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಯುಪಿಎಸ್ಸಿ, ಕೆಪಿಎಸ್ಸಿ, ಐಪಿಬಿಎಸ್, ರೈಲ್ವೆ, ಎನ್.ಡಿ.ಎ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸರಿಯಾದ ತಿಳುವಳಿಕೆಯೇ ಇಲ್ಲ.ಹಾಗಾಗಿ ಹಾಲಪ್ಪ ಪ್ರತಿಷ್ಠಾನ ತುಮಕೂರು ವಿವಿಯ ಐಕ್ಯೂಎಸಿ ವಿಭಾಗದೊಂದಿಗೆ ಸೇರಿ ನವೆಂಬರ್ 20 ಮತ್ತು 21 ರಂದು ಎರಡು ದಿನಗಳ ಉದ್ಯೋಗ ಮಾರ್ಗದರ್ಶಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.ಈಗಾಗಲೇ ತುಮಕೂರು ವಿವಿಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಪದವಿ ಕಾಲೇಜುಗಳಿಗೆ,ಹಾಗೆಯೇ ಹಳೆಯ ವಿದ್ಯಾರ್ಥಿಗಳ ಸಂಘಟನೆಗಳಿಗೆ ಮಾಹಿತಿ ನೀಡಲಾಗಿದೆ. ಆರ್ಹ 700 ಜನರಿಗೆ ಮಾತ್ರ ಈ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ಕೆಂಚಮಾರಯ್ಯ,ಡಾ.ಲೀಲಾವತಿ,ಸಿಮೆಂಟ್ ಮಂಜಣ್ಣ, ಕೆಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
