ತುಮಕೂರು: ತುಮಕೂರು ಮಹಾನಗರ ಪಾಲಿಕೆ ವಲಯ ಅಧೀಕ್ಷಕರಾದ ನಾಗರಾಜ್ ಮತ್ತು ಕಂದಾಯ ಅಧಿಕಾರಿಗಳಾದ ಯಲ್ಲಪ್ಪನವರು ಜಯನಗರ ಪಶ್ಚಿಮದಲ್ಲಿರುವ ಹಳೆಯ ಪೊಲೀಸ್ ಠಾಣೆಯ ಕಟ್ಟಡದ ವಸ್ತು ಸ್ಥಿತಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಯನಗರ ನಾಗರೀಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು, ಕಟ್ಟಡವನ್ನು ಸಾಮಾಜಿಕ ಕಾರ್ಯಗಳಿಗೆ ಅನುಕೂಲವಾಗುವಂತೆ ಸಮಿತಿಗೆ ವಹಿಸಿಕೊಡುವಂತೆ ಮನವಿ ಮಾಡಿದರು.ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಸಮಿತಿಗೆ ವಹಿಸಲು ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.
ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಎಸ್. ವೀರಪ್ಪದೇವರು, ಬಿ.ವಿ.ದ್ವಾರಕಾನಾಥ್, ಆರ್.ಎಸ್.ಬಸವರಾಜು,ಶಾಂತರಾಜು, ಶಿವಶಂಕರ್,ಮಹದೇವಪ್ಪ ಮತ್ತು ಸಮಾಜ ಸೇವಕರಾದ ಶಂಕರ್ ಉಪಸ್ಥಿತರಿದ್ದರು.
- ಚಂದ್ರಚೂಡ ಕೆ.ಬಿ.
