ತುಮಕೂರು: ಇತ್ತೀಚಿನ ದಿನಗಳಲ್ಲಿ ರೈತರ ವಿಶ್ವಾಸ ಮತ್ತು ನಿರಂತರ ಬೆಂಬಲಕ್ಕಾಗಿ ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ಕೃಷಿಯನ್ನು ಹೆಚ್ಚು ಪರಿಣಾಮಕಾರಿಯಾಗಿದೆ. ರೈತರು ಮತ್ತು ಲ್ಯಾಂಡ್ ಸ್ಕೇಪರ್ಗಳ ಕಾರ್ಯವನ್ನು ಸುಲಭಗೊಳಿಸಿ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ “ಶಕ್ತಿಶಾಲಿ ಮತ್ತು ದೀರ್ಘಕಾಲಿಕ ಸಾಧನಗಳನ್ನು ರೈತರಿಗೆ ಒದಗಿಸುವಂತೆ ಬದ್ಧವಾಗಿದೆ” ಎಂದು ಸ್ಟೀಲ್ ಇಂಡಿಯಾ ಮಾರಾಟ ನಿರ್ದೇಶಕರಾದ ರಾಘವೇಂದ್ರ ಪಿ.ಎಂ.ರವರು ತಿಳಿಸಿದರು.
ನಗರದ ಜೆ.ಸಿ.ರಸ್ತೆಯ ವಿನಾಯಕ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ “ಸ್ಟೀಲ್ ಇಂಡಿಯಾ ಮತ್ತು ಶ್ರೀರಂಗನಾಥ ಅಗ್ರಿ ಮಾರ್ಟ್ನ” ವತಿಯಿಂದ “ರೈತರಿಗೆ ರಾಷ್ಟ್ರಮಟ್ಟದ ಸ್ಕ್ಯಾಚ್ ಮತ್ತು ವಿನ್ ಬಹುಮಾನ ವಿತರಣಾ” ಹಾಗೂ ಕನ್ನಡ ರಾಜ್ಯೋತ್ಸವದ ಕರುನಾಡಿನ ರೈತರನ್ನು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಘವೇಂದ್ರ ಪಿ.ಎಂ.ರವರು ಮಾತನಾಡುತ್ತಾ ಸ್ಕ್ರಾಚ್ ಮತ್ತು ವಿನ್ ಬಹುಮಾನವು ಇದೇ ತಿಂಗಳ ನ.30 ರವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ ರೈತರಿಗೆ ಹೆಚ್ಚು-ಹೆಚ್ಚು ಅರಿವು ಮೂಡಿಸಬೇಕು ಎನ್ನುತ್ತಾ, ಸ್ಟೀಲ್ ಕಂಪನಿಯ ಎಲೆಕ್ಟ್ರಿಕ್ ಬ್ಯಾಟರಿ ಮತ್ತು ಎಂ.ಹೆಚ್.ವೀಡರ್ ಉತ್ಪನ್ನಗಳ ಮೇಲೆ ಅನ್ವಯಿಸುತ್ತದೆ. ರೈತರು ಈ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶಗಳ ಜೊತೆಗೆ ಸ್ಟೀಲ್ಇಂಡಿಯಾ ವಿಶ್ವಪ್ರಸಿದ್ಧ ಜರ್ಮನ್ ಇಂಜಿನಿಯರಿಂಗ್ನ ಅನುಭವವನ್ನೂ ಪಡೆಯಬಹುದು. ಸ್ಟೀಲ್ಇಂಡಿಯಾ ದೇಶದಾದ್ಯಂತ ಕೃಷಿ ಯಂತ್ರೋಪಕರಣದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ.
ಇದೇ ಸಂದರ್ಭದಲ್ಲಿ ಸ್ಟೀಲ್ ಇಂಡಿಯಾ ದಕ್ಷಿಣ ವಿಭಾದ ಮುಖ್ಯಸ್ಥರಾದ ಸಂಜಯ್ ವರ್ಮಾರವರು ಮಾತನಾಡುತ್ತಾ ಕನ್ನಡ ರಾಜ್ಯೋತ್ಸವ ದಿನದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪವರ್ ಟೂಲ್ ಮತ್ತು ರೈತರ ಕೃಷಿ ಯಂತ್ರೋಪಕರಣಗಳನ್ನು ವಿವಿಧ ಕ್ಷೇತ್ರದ ಜಾಗತಿಕ ಮಟ್ಟದ ಸ್ಟೀಲ್ ಇಂಡಿಯಾ ಮತ್ತು ಶ್ರೀರಂಗನಾಥ ಅಗ್ರಿ ಮಾರ್ಟ್ ಇವರುಗಳ ಸಹಯೋಗದೊಂದಿಗೆ ರೈತರಿಗಾಗಿ ಸ್ಟೀಲ್ ಕಂಪನಿಯ ವತಿಯಿಂದ ಸ್ಕ್ರಾಚ್ ಮಾಡಿ ಗೆಲ್ಲಿರಿ ಧ್ಯೇಯವಾಕ್ಯದಲ್ಲಿ ರೈತರಿಗೆ ವಿಶೇಷವಾಗಿದೆ ಎಂದರು.
ಗ್ರಾಂಡ್ ಪ್ರೈಜ್ ವಿಜೇತರಾದ ಬ್ಯಾಟರಂಗಯ್ಯರವರು ಮಾತನಾಡುತ್ತಾ ಸ್ಟೀಲ್ ಇಂಡಿಯಾ ಮತ್ತು ಶ್ರೀರಂಗನಾಥ ಅಗ್ರಿ ಮಾರ್ಟ್ ಇವರುಗಳು ರೈತರಿಗೆ ಆಧುನಿಕ ಕೃಷಿ ಪರಿಹಾರಗಳನ್ನು ಒದಗಿಸಲು ಅಮೂಲ್ಯ ಸೇವೆಯನ್ನು ನೀಡುತ್ತಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಆಕರ್ಷಕ ಬಹುಮಾನಗಳನ್ನ ಎಲೆಕ್ಟಿಕ್ ಸ್ಕೂಟರ್, ಸ್ಟೀಲ್ ಎಂಹೆಚ್-710 ಪವರ್ ವೀಡರ್, ಓಲಾ ಸ್ಕೂಟರ್ ಗೆದ್ದ ಸಂತೋಷವನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಶ್ರೀರಂಗನಾಥ ಅಗ್ರಿ ಹೌಸ್ ಮಾಲೀಕರಾದ ಶಶಿಧರ ಬಿ.ಆರ್.ರವರು ಮಾತನಾಡುತ್ತಾ ರೈತರಿಗೆ ಅತ್ಯುತ್ತಮ ಗುಣಮಟ್ಟದ ಸಾಧನಗಳನ್ನು ಒದಗಿಸಲು ಕಂಪನಿಯೂ ಬದ್ಧತೆಯನ್ನು ಪ್ರತಿಬಿಂಬಿಸಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಸ್ಟೇಟ್ ಹೆಡ್ ಶರತ್ಶೆಟ್ಟಿ, ದಯಾನಂದ್ ಹಾಗೂ ತುಮಕೂರು ಮತ್ತು ವಿವಿಧ ಜಿಲ್ಲೆಗಳಿಂದ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
