ತುಮಕೂರು: ಬಿಜೆಪಿಯ ಜಿಲ್ಲಾ ವಕ್ತಾರರಾಗಿ ಜೆ.ಜಗದೀಶ್ ರವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ನೇಮಕ ಮಾಡಿ ಆದೇಶ ಮಾಡಿದ್ದಾರೆ.
ಜಿಲ್ಲಾ ಬಿಜೆಪಿ ವಕ್ತಾರರಾಗಿ ನೇಮಕವಾಗಿರುವ ಜಗದೀಶ್ಅವರು ಈ ಮೊದಲು ಜಿಲ್ಲಾ ಮಾಧ್ಯಮ ಪ್ರಮುಖ್ ಆಗಿ,ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದರು.ಕೆಳ ಹಂತದ ಸಕ್ರಿಯ ಕಾರ್ಯಕರ್ತರಾಗಿ ಬಿಜೆಪಿಯ ಸದಸ್ಯರಾಗಿ ಪಕ್ಷವನ್ನು ಕಟ್ಟಲು ಹಗಲಿರುಳು ಶ್ರಮಿಸಿದ್ದಾರೆ.ಜೆ.ಜಗದೀಶ್ ರವರಿಗೆ ಶಾಸಕರು,ಸಂಸದರು,ಪಕ್ಷದ ಕಾರ್ಯಕರ್ತರು,ಪತ್ರಕರ್ತರು,ಸಂಘ-ಸಂಸ್ಥೆಯ ಪದಾಧಿಕಾರಿಗಳು ಶುಭಾಶಯ ಕೋರಿದ್ದಾರೆ.
– ಚಂದ್ರಚೂಡ ಕೆ.ಬಿ.
