ತುಮಕೂರು:ಶಿಕ್ಷಣವೆಂಬುದು ನಿಮ್ಮನ್ನು ಗುಡಿಸಿಲಿನಿಂದ ಅರಮನೆಗೆ ಕರೆದುಕೊಂಡು ಹೋಗುವ ರಹದಾರಿ.ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ, ಕಡಿಮೆ ಅಂಕ ಬಂತೆಂದು ಕುಗ್ಗದೆ, ಆತ್ಮಸ್ಥೈರ್ಯದಿಂದ ಮುನ್ನುಗಿದ್ದರೆ ಮುಂದೆ ಸಾಧಕರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುತ್ತದೆ ಎಂದು ಜಾನಪದ ಕಲಾವಿದ ಡಾ.ಅಮ್ಮರಾಮಚಂದ್ರ.ಜಿ. ಅಭಿಪ್ರಾಯಪಟ್ಟಿದ್ದಾರೆ.
ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರಕಾರಿ ಪ್ರಥಮದರ್ಜೆ ಕಾಲೇಜು ತುಮಕೂರಿನ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್, ಯುವರೆಡ್ಕ್ರಾಸ್, ಐಕ್ಯೂಎಸಿ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಸಂಭ್ರಮ-2026ಗೆ ಚಾಲನೆ ನೀಡಿ ಮಾತನಾಡುತಿದ್ದಅವರು, ಎಸ್.ಎಸ್.ಎಲ್.ಸಿಯಲ್ಲಿ ನಾಲ್ಕನೇ ಬಾರಿಗೆ 240 ಅಂಕ ಪಡೆದ ಪಾಸಾದ ನಾನು, ಎಂ.ಎ.ಯಲ್ಲಿ ಚಿನ್ನದ ಪದಕ ಪಡೆದೆ,ಸೂಕ್ತ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹ ದೊರೆತರೆ ದೌರ್ಬಲ್ಯಗಳನ್ನು ಮೆಟ್ಟಿನಿಂತು, ಸಾಧನೆಯಕಡೆಗೆ ಹೆಜ್ಜೆ ಹಾಕಲು ಸ್ಪೂರ್ತಿ ದೊರೆಯುತ್ತದೆ.ಸೋತವರನ್ನು ಸೋಲಿಸುವುದೇ ಸಂಭ್ರಮವಲ್ಲ. ಗೆದ್ದವರನ್ನು ಸೋಲಿಸುವುದು ನಿಜವಾದ ಸಂಭ್ರಮ.ಪೋಷಕರ ಕಣ್ಣಲ್ಲಿ ಆನಂದ ಭಾಷ್ಪ ಬರುವಂತೆ ಮಾಡುವುದೇ ನಮ್ಮ ಗುರಿಯಾಗಬೇಕು ಎಂದರು.
ಅಂತರರಾಷ್ಟ್ರೀಯ ಅಥ್ಲೇಟ್ ಶ್ರೀಮತಿ ತೇಜಶ್ವಿನಿ ಮಾತನಾಡಿ,ಕ್ರೀಡೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಕಲಿಸುವುದರ ಜೊತೆಗೆ,ಗೆಲುವಿನ ದಾರಿಯನ್ನು ಸುಲಭ ಮಾಡುತ್ತದೆ.ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳಿದ್ದು, ಎಲ್ಲಾ ಇಲಾಖೆಗಳ ಉದ್ಯೋಗದಲ್ಲಿ ಶೇ2 ರ ಮೀಸಲಾತಿ ಕಲ್ಪಿಸಲಾಗಿದೆ.ಯುವಜನರು ಇದರ ಸದುಪಯೋಗ ಪಡೆದುಕೊಂಡು, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಸಂತ.ಟಿ.ಡಿ., ಸ್ಟೂಡೆಂಟ್ ಲೈಫ್ಇಸ್ಗೋಲ್ಡನ್ ಲೈಫ್ ಎಂಬ ಮಾತುಗಳನ್ನು ನಾವು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ.ಹದಿ ಹರೆಯದ ಈ ಸಮಯವನ್ನು ನಾವು ಸಮರ್ಪಕವಾಗಿ ಬಳಸಿಕೊಂಡರೆ ಜೀವನದಲ್ಲಿ ಗೆಲ್ಲಬಹುದು.ಸುಮಾರು 3000 ವಿದ್ಯಾರ್ಥಿಗಳಿರುವ ನಮ್ಮ ಕಾಲೇಜಿಗೆ ಒಳ್ಳೆಯ ಫಲಿತಾಂಶದ ಜೊತೆಗೆ,ಪಠ್ಯೇತರ ಚಟುವಟಿಕೆಯಲ್ಲಿಯೂ ಮಕ್ಕಳು ಅಂತರರಾಜ್ಯ ವಿವಿ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.ಇದು ನಮಗೆ ಹೆಮ್ಮೆಯ ವಿಚಾರವಾಗಿದೆರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವುದರ ಜೊತೆಗೆ,ಹೊಸಬರು ಸಾಧನೆಯತ್ತ ಗಮನಹರಿಸಲಿ ಎಂದು ಶುಭ ಹಾರೈಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ಅಯೇಷಾ ಸಿದ್ದೀಖಾ,ಶಿಕ್ಷಣವೆಂಬುದು ಮಕ್ಕಳ ಸಾರ್ವಂಗೀಣ ಅಭಿವೃದ್ಧಿಯ ಸಂಕೇತವಾಗಿದೆ.ಪಠ್ಯಗಳು ನಮಗೆ ಜ್ಞಾನ ನೀಡಿದರೆ, ಪಠ್ಯೇತರ ಚಟುವಟಿಕೆಗಳು ನಮಗೆ ನಾಯಕತ್ವದ ಗುಣ,ಆತ್ಮಸ್ಥೈರ್ಯ ತುಂಬುತ್ತವೆ.ನಮ್ಮ ಕಾಲೇಜಿನಲ್ಲಿ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಅವರನ್ನು ಹುರಿದುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ.ಅನುಸೂಯ.ಕೆ.ವಿ.,ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ರೇಣುಕ ಪ್ರಸಾದ್.ಬಿ.ಆರ್,ಕನ್ನಡ ಪ್ರಾಧ್ಯಾಪಕರಾದ ಡಾ.ಗಂಗಾಧರ್.ಜೆ. ಡಾ.ಯೋಗೀಶ್, ಡಾ.ಮಲ್ಲೇಶಪ್ಪ.ಟಿ.ಎಸ್, ಮಹದೇವ್, ರಘು, ದೈಹಿಕ ಶಿಕ್ಷಣ ನಿರ್ದೇಶಕ ಮನೋಜ್ ಮತ್ತಿತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
