ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ 69ನೇ ಕಾಮನ್ವೆಲ್ತ್ ಸಂಸದೀಯ ಸಮ್ಮೇಳನವು (CPC) ಸೆಪ್ಟೆಂಬರ್ 13 ರಿಂದ 19, 2026 ರವರೆಗೆ ನಡೆಯುತ್ತಿದೆ. ಕಾಮನ್ವೆಲ್ತ್ ಸಂಸದೀಯ ಸಂಘದ (CPA) ಅಡಿಯಲ್ಲಿ ದಕ್ಷಿಣ ಆಫ್ರಿಕಾ ಸಂಸತ್ತು ಹಾಗೂ CPA ದಕ್ಷಿಣ ಆಫ್ರಿಕಾ ಶಾಖೆ ಜಂಟಿಯಾಗಿ ಈ ಪ್ರತಿಷ್ಠಿತ ಸಮಾವೇಶವನ್ನು ಆಯೋಜಿಸಿವೆ. ಸಂಸದೀಯ ಪ್ರಜಾಪ್ರಭುತ್ವ, ಶಾಸಕಾಂಗ ಪದ್ಧತಿಗಳು ಮತ್ತು ಅಂತರ-ಸಂಸದೀಯ ಸಹಕಾರದ ಕುರಿತು ಚರ್ಚಿಸಲು ಕಾಮನ್ವೆಲ್ತ್ ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದಾರೆ.
-
ಭಾರತೀಯ ನಿಯೋಗದ ನೇತೃತ್ವ: ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ನೇತೃತ್ವದ ನಿಯೋಗ ಭಾರತವನ್ನು ಪ್ರತಿನಿಧಿಸುತ್ತಿದೆ. ಈ ನಿಯೋಗದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು ಹಾಗೂ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಪಾಲ್ಗೊಂಡಿದ್ದಾರೆ.
-
ಪ್ರಮುಖ ದ್ವಿಪಕ್ಷೀಯ ಸಭೆಗಳು:
-
ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ದಕ್ಷಿಣ ಆಫ್ರಿಕಾದ ನ್ಯಾಷನಲ್ ಅಸೆಂಬ್ಲಿಯ ಸ್ಪೀಕರ್ ಏಂಜೆಲಾ ತೊಕೊಜಿಲೆ ದಿಡಿಜಾ, ಡೆಪ್ಯುಟಿ ಸ್ಪೀಕರ್ ಆನ್ನೆಲಿ ಲೋಟ್ರಿಯೆಟ್ ಮತ್ತು ನ್ಯಾಷನಲ್ ಕೌನ್ಸಿಲ್ ಆಫ್ ಪ್ರಾವಿನ್ಸಸ್ನ ಉಪಾಧ್ಯಕ್ಷ ಪೂಬಾಲನ್ ಗೋವೆಂಡರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
-
ಲೋಕಸಭಾ ಸಂಸದೆ ಡಾ. ಡಿ. ಪುರಂದೇಶ್ವರಿ ಅವರು ಸಿಪಿಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದರು.
-
ದೆಹಲಿ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಸಂಸದೀಯ ಒಳಗೊಳ್ಳುವಿಕೆ ಕುರಿತ ಜಂಟಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.
-
-
ಸಮ್ಮೇಳನದ ಮುಖ್ಯ ವಿಷಯ (Theme): 69ನೇ ಸಮ್ಮೇಳನದ ಮುಖ್ಯ ವಿಷಯ “Strengthening International Law and Parliamentary Democracy in a Changing World Order: Commonwealth Leadership” (ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಅಂತರರಾಷ್ಟ್ರೀಯ ಕಾನೂನು ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ಬಲಪಡಿಸುವುದು: ಕಾಮನ್ವೆಲ್ತ್ ನಾಯಕತ್ವ).
-
ಸ್ಪರ್ಧಾತ್ಮಕ ಪರೀಕ್ಷಾ ಮುಖ್ಯಾಂಶಗಳು:
-
ಕಾಮನ್ವೆಲ್ತ್ ಸಂಸದೀಯ ಸಮ್ಮೇಳನವು ಕಾಮನ್ವೆಲ್ತ್ ರಾಷ್ಟ್ರಗಳ ಶಾಸಕಾಂಗಗಳನ್ನು ಬೆಸೆಯುವ ವಾರ್ಷಿಕ ಶೃಂಗಸಭೆಯಾಗಿದೆ.
-
ದಕ್ಷಿಣ ಆಫ್ರಿಕಾದ ಶಾಸಕಾಂಗ ರಾಜಧಾನಿ ಕೇಪ್ ಟೌನ್ನಲ್ಲಿ ಈ 69ನೇ ಆವೃತ್ತಿ ನಡೆಯುತ್ತಿದೆ.
-
ದಕ್ಷಿಣ ಆಫ್ರಿಕಾದ ಸಂಸತ್ತು ಎರಡು ಸದನಗಳನ್ನು ಒಳಗೊಂಡಿದೆ: ನ್ಯಾಷನಲ್ ಅಸೆಂಬ್ಲಿ (ಕೆಳಮನೆ) ಮತ್ತು ನ್ಯಾಷನಲ್ ಕೌನ್ಸಿಲ್ ಆಫ್ ಪ್ರಾವಿನ್ಸಸ್ (ಮೇಲ್ಮನೆ).
-
ಭಾರತದ ಸಂಸತ್ತಿನಲ್ಲಿ ಲೋಕಸಭೆಯು ಕೆಳಮನೆಯಾಗಿದ್ದು, ರಾಜ್ಯಸಭೆಯು ಮೇಲ್ಮನೆಯಾಗಿದೆ.
-
