ಬೆಂಗಳೂರು- ಯಾವುದೇ ಕಾರಣ ಇಲ್ಲದೆ ಪೊಲೀಸರು ಇತರರ ದೂರವಾಣಿ ಕರೆಯ ವಿವರ ಪಡೆಯವುದು ಅಕ್ರಮ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಪೊಲೀಸರು ತಮ್ಮ ಮನಬಂದಂತೆ ಅನಗತ್ಯವಾಗಿ ತಮಗೆ ಬೇಕಾದವರ ಸಿಡಿಆರ್ ಪಡೆಯುವ ಅಧಿಕಾರ ಚಲಾಯಿಸುತ್ತಾ ಹೋದರೆ ಅದು ಪೊಲೀಸ್ ರಾಜ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ನಾನು ಪೊಲೀಸ್ ಅಧಿಕಾರಿಯಾಗಿದ್ದೇನೆ ಎಂದು ದುರಂಹಕಾರ ಮತ್ತು ದರ್ಪದೀದಮ ಯಾರದೋ ಮೊಬೈಲ್ನ ಸಿಡಿಆರ್ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ದೂರವಾಣಿ ಕರೆಯ ವಿವರ(ಕಾಲ್ ಡೀಟೇಲ್ಸ್ ರಿಪೋರ್ಟ್)ಗಳನ್ನು ಕಾನೂನುಬದ್ಧ ತನಿಖಾಧಿಕಾರಿಯಿಂದ ಮಾತ್ರ ಪಡೆಯಬಹುದು. ಇಲ್ಲದಿದ್ದರೆ ನಮ್ಮ ಸಮಾಜ ಪೊಲೀಸ್ ರಾಜ್ಯವಾಗಿ ಬದಲಾಗಬಹುದು ಎಂದು ಎಚ್ಚರಿಸಿದರು.
