ಬೆಂಗಳೂರು: ಆಗಸ್ಟ್ 2 ರಂದು ದೇಶಾದ್ಯಂತ ಫ್ರೆಂಡ್ ಶಿಪ್ ಡೇ) ಆಚರಿಸಲಾಗುತ್ತಿದ್ದು, ಈ ವಿಶೇಷ ಸಂದರ್ಭಕ್ಕಾಗಿ ಪ್ರಮುಖ ಟೆಲಿಕಾಂ ಸಂಸ್ಥೆ ಏರ್ ಟೆಲ್ ತನ್ನ ಗ್ರಾಹಕರಿಗಾಗಿ ಅತ್ಯಂತ ವಿನೂತನ ಮತ್ತು ಸ್ವಾರಸ್ಯಕರ ಸೌಲಭ್ಯವೊಂದನ್ನು ಪರಿಚಯಿಸಿದೆ. ಗ್ರಾಹಕರು ಇನ್ಮುಂದೆ ಏರ್ ಟೆಲ್ ಆ್ಯಪ್ ಮೂಲಕ ತಮ್ಮ ಸ್ನೇಹಿತರ ಪ್ರೀಪೇಯ್ಡ್ ಸಂಖ್ಯೆಗೆ ರೀಚಾರ್ಜ್ ಮಾಡುವ ಜೊತೆಗೆ, ಅವರಿಗೆ ವಿಶೇಷವಾದ ಡಿಜಿಟಲ್ ಫ್ರೆಂಡ್ ಶಿಪ್ ಬ್ಯಾಂಡ್ ಕಳುಹಿಸಿ ಶುಭ ಕೋರಬಹುದಾಗಿದೆ (**Valid till 2nd August 2026).
ದೈನಂದಿನ ಸಾಮಾನ್ಯ ರೀಚಾರ್ಜ್ ಪ್ರಕ್ರಿಯೆಗೆ ಪ್ರೀತಿಯ ಸ್ಪರ್ಶ ನೀಡುವ ಉದ್ದೇಶದಿಂದ ಈ ಅಭಿಯಾನವನ್ನು ರೂಪಿಸಲಾಗಿದೆ. ಈ ಸೇವೆಯನ್ನು ಪಡೆಯಲು ಗ್ರಾಹಕರು ಮೊದಲು ಏರ್ ಟೆಲ್ ಆ್ಯಪ್ ನಲ್ಲಿ ತಮ್ಮ ಸ್ನೇಹಿತರ ಏರ್ ಟೆಲ್ ಪ್ರೀಪೇಯ್ಡ್ ಸಂಖ್ಯೆಯನ್ನು ನಮೂದಿಸಿ, ಸೂಕ್ತವಾದ ಪ್ರಿಪೇಡ್ ಪ್ಲಾನ್ ಆಯ್ಕೆ ಮಾಡಿ ರೀಚಾರ್ಜ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ತದನಂತರ, ತಮ್ಮ ಗೆಳೆತನದ ಸ್ವರೂಪಕ್ಕೆ ಹೊಂದುವಂತಹ ವಿವಿಧ ಶೀರ್ಷಿಕೆಯ ಡಿಜಿಟಲ್ ಫ್ರೆಂಡ್ ಶಿಪ್ ಬ್ಯಾಂಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದರಲ್ಲಿ ಜಿಮ್ ಬಡ್ಡಿ, ಮೀಮ್ ಡೀಲರ್, ಗೆಡಿ ಪಾರ್ಟ್ ನರ್, ಫುಡಿ ಫ್ರೆಂಡ್, ಗಾಸಿಪ್ ಸ್ಪಿಲ್ಲಿಂಗ್ ಮತ್ತು ಫ್ರೀ ಥೆರಪಿಸ್ಟ್ ಎಂಬಿತ್ಯಾದಿ ಮೋಜಿನ ಶೀರ್ಷಿಕೆಗಳ ಬ್ಯಾಂಡ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಆಯ್ಕೆ ಮಾಡಿದ ಡಿಜಿಟಲ್ ಬ್ಯಾಂಡ್ ಅನ್ನು ವಾಟ್ಸಾಪ್ ಅಥವಾ ಎಸ್ಎಂಎಸ್ ಮೂಲಕ ತಕ್ಷಣವೇ ಸ್ನೇಹಿತರಿಗೆ ಕಳುಹಿಸಬಹುದು. ಎಸ್ಎಂಎಸ್ ಮೂಲಕ ಕಳುಹಿಸುವಾಗ ಶುಭಾಶಯದ ಜೊತೆಗೆ ಕಳುಹಿಸಿದವರ ಹೆಸರೂ ಸೇರ್ಪಡೆಯಾಗಲಿದ್ದು, ಸಂದೇಶಕ್ಕೆ ವೈಯಕ್ತಿಕ ಮೆರುಗು ನೀಡಲಿದೆ. ಇಷ್ಟೇ ಅಲ್ಲದೆ, ಈ ಬ್ಯಾಂಡ್ ಪಡೆದ ಸ್ನೇಹಿತರು ಸಹ ಅಭಿಯಾನದ ಪುಟದ ಮೂಲಕ ತಮ್ಮ ಇತರ ಸ್ನೇಹಿತರಿಗೆ ಬ್ಯಾಂಡ್ ಹಾಗೂ ರೀಚಾರ್ಜ್ ಉಡುಗೊರೆ ನೀಡಿ ಈ ಸರಪಳಿಯನ್ನು ಮುಂದುವರಿಸಬಹುದಾಗಿದೆ.
ಹಿಂದಿನ ಕಾಲದಲ್ಲಿ ಕೈಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಸಾಂಪ್ರದಾಯಿಕ ಆಚರಣೆಗೆ ಇಂದಿನ ಡಿಜಿಟಲ್ ಜಗತ್ತಿಗೆ ತಕ್ಕಂತೆ ಏರ್ ಟೆಲ್ ಹೊಸ ರೂಪ ನೀಡಿದೆ. ಸಾಮಾನ್ಯ ರೀಚಾರ್ಜ್ ಅನ್ನು ನೆನಪಿನಲ್ಲಿ ಉಳಿಯುವಂತಹ ಆಚರಣೆಯನ್ನಾಗಿ ಪರಿವರ್ತಿಸಿರುವ ಈ ಅಭಿಯಾನವು, ಸ್ನೇಹಿತರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ನೆರವಾಗಲಿದೆ.
