ನಾನು ಮಂಗೋಲಿಯ ದೇಶದ ವ್ರವಾಸದಲ್ಲಿ ಅಲ್ಲಿಯ ಹಳೇ ರಾಜಧಾನಿಯಾದ ಕಾರಕೋರಮ್ ಬುದ್ದನ ವಿಹಾರಕ್ಕೆ ಹೋಗಿದ್ದಾಗ ನಮ್ಮ ಭಾರತ ದೇಶದಲ್ಲಿ ಇರುವಂತಹ ಹಲವಾರು ದೇವಿ ದೇವತಗಳ ಚಿತ್ರಗಳು ಇದ್ದವು. ಉದಾಹರಣೆಗೆ ಡಾಕಿನಿ, ರುದ್ರಿ, ರುದ್ರ, ಮಹಿಷಿ, ಕಾಳಿ, ಹೀಗೆ. ಇವರೆಲ್ಲರು ಬುದ್ದನ ಅವತಾರಗಳು. ಇದೇ ತರಹ ಶಾಂಘೈ ನಗರದ ” jade Budda” ದೇವಸ್ಥಾನಕ್ಕೆ ಹೋದಾಗ ಅಲ್ಲಿಯೂ ಸಹ ಬುದ್ದನ future, present, past, wisdom, knowledge, peace ಮತ್ತು power ಹೀಗೆ ವಿವಿಧ ಅವತಾರಗಳನ್ನು ನೋಡಬಹುದು ಮತ್ತು ಅಲ್ಲಿಯ ನಾಗರಿಕರು ಅವರೇ ಸೃಷ್ಟಿಸಿದ ಅಭಿವ್ಯಕ್ತಿ ವಿವಿಧ ಬುದ್ದರನ್ನು ಪೂಜಿಸುತ್ತಾರೆ. ಭೌಧ್ದ ಧರ್ಮದವರು ಈ ವಿಹಾರಕ್ಕೆ ಬಂದು ಊದುಕಡ್ಡಿಯನ್ನು ಹಚ್ಚಿ ಅವರವರ ಬೇಡಿಕೆಗಳನ್ನು manifested ಬುದ್ದರಿಗೆ ಇಡುತ್ತಾರಂತೆ. ನಾವು ಸಹ ಊದುಕಡ್ಡಿಗಳನ್ನು ಹಚ್ಚಲು ಮರೆಯಲಿಲ್ಲ.

1880 ನೇ ಇಸವಿಯಲ್ಲಿ ಹಂಗೇರಿಯನ್ ಮಾಂಕ್” ಮಾಸ್ಟರ್ ಹೂಗೇನ್” ಚೀನಾ ದೇಶಕ್ಕೆ ಬಂದಾಗ ಆ ದೇಶದ sculptor ಐದು ಬುದ್ಧರ ಜೇಡ್ ವಿಗ್ರಹಗಳನ್ನು ಮಾಂಕ್ ಗೆ ನೀಡಿದ್ದರಂತೆ. ಈ ಸ್ಥಳಕ್ಕೆ ಬಂದು ಎರಡು ಬುದ್ಧ, ಅಂದರೆ sitting and reclining ಬುದ್ಧರನ್ನು ಹಂಗೇರಿಯನ್ ಮಾಂಕ್ ಪ್ರತಿಷ್ಠಾನ ಮಾಡಿದ್ದಾರೆ. ಅಮೂಲ್ಯವಾದ ಜೇಡ್ ಕಲ್ಲಿನಿಂದ ಕೆತ್ತಿರುವ ಈ ಬುದ್ಧರ ವಿಗ್ರಹಗಳು ನೋಡಲು ತುಂಬಾ ಅಂದವಾಗಿವೆ.

ನಾವು ನ್ಯೂಜೀಲ್ಯಾಂಡ್ ಪ್ರವಾಸದಲ್ಲಿ ಇದ್ದಾಗ ಅಲ್ಲಿಯ ನಾಗರಿಕರು “ಮನುಕಾ” ಮರವನ್ನು ದೇವರೆಂದು ಪೂಜಿಸುವುದನ್ನು ನೋಡಿದ್ದೇವೆ. ಕಾರಣ, ಆ ಮರದಲ್ಲಿ ಔಷದಿ ಅಂಶ ಇದೆ ಎಂದು. ಇಡೀ ಮರದ components ನ್ನು facial cream, soap, native medicine ಹೀಗೆ ಅಲ್ಲಿಯವರು ಉಪಯೋಗಿಸುತ್ತಾರೆ. ಇದರ ಹೂ ನಿಂದ ಬಂದ ಜೇನುತುಪ್ಪವನ್ನು ಜ್ವರ, ಶೀತ ಮತ್ತು ಮೈಕೈ ನೋವುಗಳಿಗೆ ಉಪಯೋಗಿಸುತ್ತಾರೆ. ಹಾಗಯೇ ಚೀನಾದ ಗ್ವಾಂಕ್ಸೀ province ನಲ್ಲೇ ಸಿಗುವ “osamenthus” ಹೂ ತುಂಬಾ ಶ್ರೇಷ್ಟವಾದ ಹೂ ಎಂದು ಅಲ್ಲಿಯ ಪ್ರಜೆಗಳು ನಂಬುತ್ತಾರೆ.

ಗ್ವಿಲಿನ್ ನಗರ ಈ ಪ್ರಾವಿನ್ಸಗೆ ಸೇರಿದ್ದು. ಆದುದರಿಂದ ಅಲ್ಲಿ ಒಸಮೆಂತಸ್ ಹೂ ಕುರಿತು museum ಇದೆ. ಈ ಹೂವಿನಲ್ಲಿ ಪ್ರೋಟಿನ್ ಮತ್ತು ಔಷಧೀಯ ಗುಣ ಇದೆ ಎಂದು ನಂಬುತ್ತಾರೆ. ಇದರಿಂದ ತಯಾರದ ಕುಕ್ಕೀಸ್, ಬಿಸ್ಕೆಟ್, ಸಿಹಿ ಪದಾರ್ಥ, facial and body creams, ಜೇನುತುಪ್ಪ ಹೀಗೆ ಹಲವಾರು ಉತ್ಪನ್ನಗಳು ಇಲ್ಲಿ ಮಾರಟಕ್ಕೆ ಸಿಗುತ್ತವೆ.

ನಾವು ಯಾವುದೇ ದೇಶದ ರಾಜಧಾನಿಗಳಿಗೆ ಹೋದರು ಅಲ್ಲಿ ಟವರ್ಸ ಅಥವಾ ಗೋಪುರಗಳು ನೋಡಬಹುದು. ಇದೇ ತರಹ ಶಾಂಘೈ ನಗರದಲ್ಲೂ ಇದೆ. ಇದು ಇಲ್ಲಿಯ iconic ಸ್ಮಾರಕ. ಇದನ್ನು “ಓರಿಯಂಟಲ್ ದೂರ ದರ್ಶನ ಗೋಪುರ” ಎಂದು ಕರೆಯುತ್ತಾರೆ. ಈ ಗೋಪುರ 1400 ಅಡಿ ಎತ್ತರವಿದೆ. ಮೇಲೆ glass ಡೆಕ್ ಇದ್ದು revolving restaurant ಸಹ ಇದೆ.

ದೊಂಬರಾಟಕ್ಕೆ ಚೀನಾ ಮತ್ತು ರಷ್ಯ ಪಟುಗಳು ಫೇಮಸ್. ನಾವು ಶಾಂಘೈ ನಗರದ “ಎರಾ (Era)” ವರ್ಲ್ಡ್ ಸರ್ಕಸ್ arena ಬೇಟಿ ಮಾಡಿದೆವು. ಇವರ ದೊಂಬರಾಟ ಗುರುತ್ವಾಕರ್ಷಣೆ ವಿರುದ್ಧವಾದ show. ಒಂದೊಂದು move ಫಿಸಿಕ್ಸ ಮೀರಿದ ಆಟಗಳಾಗಿದ್ದವು. ಇದು ಒಂದು ಗಂಟೆಯ ಶೋ. ಕೊನೆಗೆ iron globe ಒಳಗೆ ನಡೆದಂತಾ ಬೈಕ್ synchronic sorty ಅದ್ಭುತವೇ ಸರಿ. ಸ್ವಲ್ಪ ಯಾಮಾರಿದರು ಸಾವಿಗೆ ಅಹ್ವಾನ. ಎಂಟು ಬೈಕ್ಗಲು ಒಂದೆ ಸಾರಿ ಗಿರಿಗಟ್ಟಲೆ ಹೋಡಿಯೋದು ನೋಡುವರಿಗೆ ಹೃದಯ ಕೈಗೆ ಬಂದ ಹಾಗೆ ಆಗುತ್ತಿತ್ತು. ಆ scenery ವಿಸ್ಮಯ ಮತ್ತು ರೋಮಾಂಚನ. ಬಣ್ಣದ ಬೆಳಕಿನ ಚಿತ್ತಾರ psychedelic ಪ್ರಭಾವ ಬೀರುತ್ತಿತ್ತು.

ಇದೇ ತರಹದ ಶೋ ಝಾನ್ಜೀಜೇ ಟಿಯನ್ಮನ್ fairy fox ಶೋ ನೋಡಿದೆವು. ಈ ಶೋ huge ಬಯಲು ರಂಗ ಮಂದಿರದಲ್ಲಿ ನಡೆಯುವುದು. ಇದರ back drop ಟಿಯನ್ಮನ್ mountain range. ಒಂದೇ ಸಾರಿ ನೂರಾರು ನಟರು stage ಲ್ಲಿ ಕಾಣಿಸಿ act ಮಾಡುವ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತಿದ್ದವು. Stage setting ಮತ್ತು ಬಣ್ಣದ ಬೆಳಕಿನ combinations ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತಿದ್ದವು. ಆ ಸಮಯದಲ್ಲಿ ಬಿದ್ದ ಧಾರಾಕಾರ ಮಳೆಗೆ ನಾವು ಮಧ್ಯ ಆಟದಲ್ಲೇ ಹೋರ ಬಂದೆವು. ಎಲ್ಲರಿಗೂ ನಿರಾಸೆ ಕಾದಿತ್ತು. ಇಲ್ಲಿಯ ಸೀಟ್ number even ಅಥವಾ ಬೆಸೆ ಸಂಖ್ಯೆ. ಅಂದರೆ ಒಂದು ಮತ್ತು ಮೂರು ಪಕ್ಕದಲ್ಲೇ ಇರುತ್ತದೆ. ಎರಡರಿಂದ ಶುರು ಆದರೆ next number ನಾಲ್ಕು. ಇಲ್ಲಿ ಎಲ್ಲೇ ಹೋದರು ಇದೇ rules. ಉದಾಹರಣೆಗೆ flight , railway or theatre seats ಗಳಲ್ಲಿ.

“Yu garden” ಶಂಘೈ ನಗರದ ಒಂದು ಅಚ್ಚುಕಟ್ಟಾದ ಮತ್ತು ಅದ್ಭುತವಾದ ಚೀನಿಯರ ವಾಸ್ತುಶಿಲ್ಪ ಪ್ರಕಾರ ಜೀವಿಸುವುದಕ್ಕೆ ಕಟ್ಟಿಸಿದ ಮನೆ ಅಥವಾ farm house. ಮಿಂಗ್ ರಾಜವಂಶಸ್ತರು ಕಟ್ಟಿಸಿದ ಈ ವಾಸದ ಮನೆ ನಾನೂರು ವರ್ಷಗಳ ಹಳೆಯದು. ಕಟ್ಟಿಸಲು ಸುಮಾರು ಇಪ್ಪತ್ತು ವರ್ಷಗಳು ತೆಗೆದುಕೊಳ್ಳಲಾಗಿದೆ. ಇಲ್ಲಿಯ ವಿನ್ಯಾಸ ಫೆಂಗ್ ಶೊಯೀ ವಾಸ್ತುಶಿಲ್ಪ ಪ್ರಕಾರ ಕಟ್ಟಿಸಿದ್ದಾರೆ.

ಅಲ್ಲಿಯ ಟೀ house, twisted bridge, half circular bridges, ಸಣ್ಣ ಕಾಲುವೆ, ಚಿಕ್ಕ ಸರೋವರ, ಆಮೆ, ಮೀನು ಹೀಗೆ ಒಂದೊಂದಕ್ಕೂ ಶಾಂತಿ, ಆಯಸ್ಸು, ಶಕ್ತಿ, ಬುದ್ದಿ ಹೀಗೆ ಈ ತರಹದ ಅರ್ಥಗಳು ಬರುವ ಹಾಗೆ ಇಟ್ಟಿರುತ್ತಾರೆ. ಇಲ್ಲಿಯ ಹೂ ತೋಟ ಅತ್ಯುತ್ತಮ ಹಾಗು ನೋಡುವರಿಗೆ ಹಸಿರಿನ ಹಬ್ಬ. ಈ ಸ್ಥಳ ಹಳೇ ಶಾಂಘೈ ನಗರದಲ್ಲಿ ಇದೆ. ಹೊಸ ಶಾಂಘೈ ನಗರವನ್ನು “ಪುಡಾಂಗ್” ಎಂದು ಕರೆಯುವರು. ಸಹಸ್ರಾರು ವರ್ಷಗಳ ಕಾಲ ದೊಡ್ಡ ಕಲ್ಲುಬಂಡೆಗಳನ್ನು ಕೊರೆದು ಕಂದರ ಮಾಡಿದ ಬಂಡೆ ಕಲ್ಲುಗಳನ್ನು ಇಲ್ಲಿ ಇಟ್ಟಿದ್ದಾರೆ. ವಿಶೇಷತೆ ಏನಂದರೆ ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಈ ತರಹದ ರಂಧ್ರಗಳು ಈ ಬಂಡೆಗಳಿಗೆ ಇರುತ್ತವೆ. ಮಧ್ಯ ಭಾಗದಲ್ಲೀ ದೂಪ ಅಥವಾ ಸಾಮ್ರಾಣಿ ಹೊಗೆ ಎಬ್ಬಿಸಿದರೆ ನಾಲ್ಕು ದಿಕ್ಕಗಳಲ್ಲೂ ಹೊಗೆ ಹೊರ ಬರುತ್ತದೆ. Yu garden ಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಝೂಜಿಯಾಜಿಯಾವೋ water town ಹಳೇ ಶಾಂಘೈ ನಗರದಲ್ಲಿ ನೋಡಲೇಬೇಕಾದ ಸ್ಥಳ. 1700 ವರ್ಷಗಳ ಹಿಂದೆ ಕಟ್ಟಿದಂತಾ ಈ ಹಳ್ಳಿ ಚೀನಾ ಸ್ಥಳೀಯ ಮತ್ತು ಪಾರಂಪರಿಕ ವಾಸ್ತುಶಿಲ್ಪ ಹೊಂದಿದೆ. ಇದನ್ನು venice of ಚೀನಾ ಎಂದು ಕರೆಯುತ್ತಾರೆ. ಇಲ್ಲಿ ನೀರಿನ ಜಲಮಾರ್ಗ ಇದ್ದು ಅಕ್ಕಪಕ್ಕ ಸ್ಥಳೀಯ market ಇದೆ. ಚೀನಿ ಮಾದರಿಯ ಮರದ ಹಲಗೆಗಳ ಬೋಟ್ ಮೂಲಕ main ಜಲಮಾರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ.

ವಿಶೇಷ ಎಂದರೆ ಈ ಜಲಮಾರ್ಗ ದಾಟಲು ಮೂವತ್ತಾರು ಕಲ್ಲಿನಿಂದ ನಿರ್ಮಿತವಾದ ಸೇತುವೆಗಳು ಇವೆ. ಅದರಲ್ಲಿ ಒಂದು, ಹೊಟ್ಟೆಮೇಲೆ ಮಲಗಿರುವ “9” ತರ ಬರುವಂತೆ ಸೇತುವೆಯನ್ನು ನಿರ್ಮಿಸಿದ್ದಾರೆ. ಮೊದಲೇ ಹೇಳಿದಂತೆ ಚೀನಿಯರಿಗೆ “9” lucky ನಂಬರ್. ಈ ಸೇತುವೆಯ ಮೇಲೆ ಅಲ್ಲಿ ಬಂದಂತಾ ಎಲ್ಲಾ ಪ್ರವಾಸಿಗರು ಹತ್ತುತ್ತಾರೆ ಮತ್ತು ನಿಲ್ಲುತ್ತಾರೆ. ಈ bridge ಮೀಲೆ ನಿಂತರೆ cosmic energy ನಿಂತವರಿಗೆ ಬರುತ್ತಂತೆ. ನಾನು ನಿಂತಿದ್ದೆ.

ಮುಂದುವರಿಯುವುದು…

