Chia Seeds: ಚಿಯಾ ಬೀಜಗಳಲ್ಲಿ ಹೇರಳವಾಗಿ ಪ್ರೋಟೀನ್ ಮತ್ತು ಫೈಬರ್ ಇರುವುದರಿಂದ ಜಗತ್ತಿನಾದ್ಯಂತ ಹೆಚ್ಚಿನ ಜನರು ಇದನ್ನು ಸೇವಿಸುತ್ತಾರೆ. ಹೆಚ್ಚಾಗಿ ಚಿಯಾ ಬೀಜಗಳನ್ನು ನೀರು ಅಥವಾ ಹಾಲಿನಲ್ಲಿ ನೆನೆಸಿ ಜ್ಯೂಸ್ ಮತ್ತು ಮೊಸರಿಗೆ ಸೇರಿಸಿ ಕುಡಿಯುತ್ತೇವೆ. ಆದರೆ ಅದು ಸರಿಯೇ? ಹಾಗಾದ್ರೆ ಚಿಯಾ ಬೀಜಗಳೊಂದಿಗೆ ಬೇರೆ ಯಾವೆಲ್ಲಾ ಆಹಾರಗಳನ್ನು ಸೇರಿಸಿ ತಿನ್ನಬಾರದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಚಿಯಾ ಬೀಜಗಳನ್ನು ನಾವು ಪ್ರತಿದಿನ ಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ಕರುಳಿನ ಚಲನೆಯನ್ನು ಸುಧಾರಿಸುವುದು, ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುವುದು ಸೇರಿದಂತೆ ಹಲವು ಪ್ರಯೋಜನಗಳಿವೆ. ಆದರೆ ನಾವು ಅವುಗಳನ್ನು ತಪ್ಪಾಗಿ ಸೇವಿಸಿದರೆ, ಅದರಿಂದ ನಮ್ಮ ಆರೋಗ್ಯಕ್ಕೆ ಯಾವುದೇ ಪ್ರಯೋಜನ ಸಿಗದೇ ಇರಬಹುದು.
ಇವುಗಳ ಜೊತೆ ಸೇವಿಸಬಾರದು?
1. ಸೊಪ್ಪು
ಚಿಯಾ ಬೀಜಗಳನ್ನು ತಿನ್ನುವಾಗ ನೀವು ಯಾವುದೇ ರೀತಿಯ ಸೊಪ್ಪನ್ನು ಸೇವಿಸಬಾರದು. ಸೊಪ್ಪಿನಲ್ಲಿ ಆಕ್ಸಲೇಟ್ಗಳು ಅಧಿಕವಾಗಿರುವುದರಿಂದ, ಅವು ಇತರ ಆಹಾರಗಳಿಂದ ಖನಿಜಗಳನ್ನು ಸರಿಯಾಗಿ ಹೀರಿಕೊಳ್ಳುವುದಿಲ್ಲ. ಚಿಯಾ ಬೀಜಗಳಲ್ಲಿ ಕ್ಯಾಲ್ಸಿಯಂ ಹೆಚ್ಚಿರುವುದರಿಂದ ಸೊಪ್ಪಿನೊಂದಿಗೆ ಸೇವಿಸಿದರೆ, ಅವುಗಳಲ್ಲಿರುವ ಕ್ಯಾಲ್ಸಿಯಂ ದೇಹಕ್ಕೆ ಸಿಗುವುದಿಲ್ಲ.
2. ಕಾಫಿ
ಈ ಎರಡನ್ನೂ ಸೇರಿಸುವುದರಿಂದ ಕರುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ, ಚಿಯಾ ಬೀಜಗಳನ್ನು ತಿನ್ನುವುದು ಮತ್ತು ಕಾಫಿ ಕುಡಿಯುವುದರ ನಡುವೆ ಕನಿಷ್ಠ ಅರ್ಧ ಗಂಟೆಯ ಅಂತರವಿರಬೇಕು.
3. ಸಿಹಿ ಅಂಶವಿರುವ ಹಣ್ಣುಗಳು
ಚಿಯಾ ಬೀಜಗಳಲ್ಲಿ ಕರಗುವ ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆದರೆ ನೀವು ಅದನ್ನು ದ್ರಾಕ್ಷಿ, ಬಾಳೆಹಣ್ಣು ಮತ್ತು ಮಾವಿನಹಣ್ಣಿನಂತಹ ಸಕ್ಕರೆ ಅಧಿಕವಾಗಿರುವ ಹಣ್ಣುಗಳೊಂದಿಗೆ ಸೇವಿಸಿದರೆ, ಅದು ಹೊಟ್ಟೆಯ ಆರೋಗ್ಯಕ್ಕೆ ತೊಡಕಾಗಬಹುದು.
4. ದ್ವಿದಳ ಧಾನ್ಯ
ಚಿಯಾ ಬೀಜಗಳಲ್ಲಿ ನಾರಿನಂಶವೂ ಹೆಚ್ಚಾಗಿರುತ್ತದೆ. ದ್ವಿದಳ ಧಾನ್ಯಗಳಲ್ಲಿಯೂ ನಾರಿನಂಶ ಹೆಚ್ಚಾಗಿರುತ್ತದೆ. ಈ ಎರಡನ್ನೂ ಸೇರಿಸಿದಾಗ, ನಿಮಗೆ ಅಗತ್ಯಕ್ಕಿಂತ ಹೆಚ್ಚಿನ ನಾರು ಸಿಗುತ್ತದೆ. ನೀವು ಹೆಚ್ಚು ನಾರು ಸೇವಿಸಿದರೆ ಮತ್ತು ಸಾಕಷ್ಟು ನೀರು ಕುಡಿಯದಿದ್ದರೆ ಅದು ನಿಮ್ಮ ದೇಹದ ಮೇಲೆ ಪರಿಣಾಮ ಉಂಟುಮಾಡಬಹುದು.
5. ಪ್ರೋಟೀನ್ ಪೌಡರ್
ನೀವು ಚಿಯಾ ಬೀಜಗಳನ್ನು ನಿಮ್ಮ ಪ್ರೋಟೀನ್ ಶೇಕ್ ಜೊತೆಗೆ ಕುಡಿಯುವ ತಪ್ಪನ್ನು ಎಂದಿಗೂ ಮಾಡಬೇಡಿ. ನೀವು ಚಿಯಾ ಬೀಜಗಳನ್ನು ಪ್ರೋಟೀನ್ ಶೇಕ್ ಜೊತೆಗೆ ಬೆರೆಸಿದರೆ, ಅವು ಕರಗುವುದಿಲ್ಲ ಮತ್ತು ನಮಗೆ ಅವುಗಳಲ್ಲಿರುವ ಪೋಷಕಾಂಶಗಳು ಸಿಗುವುದಿಲ್ಲ.
6. ಹಾಲು ಮತ್ತು ಹಾಲಿನ ಉತ್ಪನ್ನಗಳು
ನಾವು ಹೆಚ್ಚಾಗಿ ಚಿಯಾ ಬೀಜಗಳನ್ನು ಹಾಲಿನಲ್ಲಿ ನೆನೆಸಿ ಪುಡಿಂಗ್ ರೂಪದಲ್ಲಿ ಅಥವಾ ಮೊಸರಿನೊಂದಿಗೆ ಬೆರೆಸಿ ತಿನ್ನುತ್ತೇವೆ. ಆದರೆ ಅದು ತುಂಬಾ ತಪ್ಪು. ಚಿಯಾ ಬೀಜಗಳು ಸಸ್ಯ ಆಧಾರಿತ ಪ್ರೋಟೀನ್. ಅದನ್ನು ಹಾಲಿನೊಂದಿಗೆ ಸೇವಿಸಿದಾಗ, ಅದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
