ತುಮಕೂರು: ನಗರದ ಜಯನಗರ ಪತ್ರಿನ ಸೌಹಾರ್ದ ಸಹಕಾರಿ ಸಂಘ (ನಿ.)ಕ್ಕೆ ನೂತನ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಪಾಲನೇತ್ರಯ್ಯ, ಅಧ್ಯಕ್ಷರಾಗಿ ಆರ್.ಎಸ್. ವೀರಪ್ಪದೇವರು ಹಾಗೂ ಉಪಾಧ್ಯಕ್ಷರಾಗಿ ವಿ.ಪಿ. ಮಂಜಣ್ಣ ಅವರು ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಬಿ.ವಿ. ದ್ವಾರಕಾನಾಥ್, ಲಕ್ಷ್ಮೀನಾರಾಯಣ ಶೆಟ್ಟಿ, ಎಸ್. ಮಹದೇವಪ್ಪ, ದಯಾನಂದ್, ಎಂ.ಎಸ್. ವೇದಮೂರ್ತಿ, ಪ್ರೇಮಾರಾಧ್ಯ ಎಸ್.ಸಿ., ಮೋಹನ್ ಕುಮಾರ್ ಟಿ.ಎಸ್. ಹಾಗೂ ಡಾ. ಹಿರೇಮಠ್ ಅವರನ್ನು ನೇಮಕ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶ್ರೀಮತಿ ಕೆ.ಆರ್. ಮಂಜುಳಾ ಹಾಗೂ ಕಾನೂನು ಸಲಹೆಗಾರರಾಗಿ ಕೆ.ಬಿ. ಚಂದ್ರಚೂಡ್ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಂಘದ ನೂತನ ಅಧ್ಯಕ್ಷ ಆರ್.ಎಸ್. ವೀರಪ್ಪದೇವರು, ನೂತನ ಕಾರ್ಯಕಾರಿ ಮಂಡಳಿಯು ಸಂಘದ ಅಭಿವೃದ್ಧಿ ಹಾಗೂ ಸದಸ್ಯರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್
