ಕೆ.ಆರ್.ಪೇಟೆ:ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೆನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಲ್ಲೆನಹಳ್ಳಿ ನಿಂಗೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಹಿಂದಿನ ಅಧ್ಯಕ್ಷರಾಗಿದ್ದ ಅಶೋಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಲ್ಲೆನಹಳ್ಳಿ ನಿಂಗೇಗೌಡ ಅವರನ್ನು ಹೊರತುಪಡಿಸಿ ಬೇರೆ ಯಾವ ನಿರ್ದೇಶಕರಿಂದ ಉಮೇದುವಾರಿಕೆ ಸಲ್ಲಿಸದ ಹಿನ್ನೆಲೆ ನಿಂಗೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಡೈರಿ ಕಾರ್ಯದರ್ಶಿ ಧನುಷ್ ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಬಲ್ಲೆನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಲ್ಲೆನಹಳ್ಳಿ ರಮೇಶ್ ಅವರು ಸಂಘವನ್ನು ಪಾರದರ್ಶಕವಾಗಿ ರೈತರ ಹಿತ ಕಾಪಾಡುವ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು.ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಹಣ ಪಾವತಿ, ಗುಣಮಟ್ಟದ ಪಶು ಆಹಾರ ಪೂರೈಕೆ ಮೂಲಕ ಸಂಘವನ್ನು ಮಾದರಿ ಸಂಘವನ್ನಾಗಿ ಬೆಳೆಸಬೇಕು ಎಂದು ಕಿವಿಮಾತು ತಿಳಿಸಿದರು.
ನೂತನ ಅಧ್ಯಕ್ಷ ಬಲ್ಲೆನಹಳ್ಳಿ ನಿಂಗೇಗೌಡ ಅವರು ತಮಗೆ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ.ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮವಹಿಸುತ್ತೇನೆ.ರೈತರ ಹಿತವೇ ನನ್ನ ಮೊದಲ ಆದ್ಯತೆ. ಸಂಘವನ್ನು ಎಲ್ಲರ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಬಳಿಕ ಮಾತನಾಡಿದ ಗುತ್ತಿಗೆದಾರ ಹಾಗೂ ಗಂಜಿಗೆರೆ ತಾ.ಪಂ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಬಲ್ಲೆನಹಳ್ಳಿ ರಾಮು ಅವರು ಸಹಕಾರ ಸಂಘಗಳು ಗ್ರಾಮೀಣ ಭಾಗದ ರೈತರ ಜೀವನಾಡಿ ಇದ್ದಂತೆ ನಮ್ಮ ಕಾಂಗ್ರೆಸ್ ಸರ್ಕಾರ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರತಿ ಲೀಟರ್ ಹಾಲಿಗೆ 7 ರೂಪಾಯಿ ಹೆಚ್ಚಿಸಿ, ರೈತರ ಪರವಾದ ಸರ್ಕಾರ ಎಂದು ತೋರಿಸಿದೆ.ಹಾಲು ಉತ್ಪಾದಕ ರೈತರಿಗೆ ಇದು ದೊಡ್ಡ ನೆರವಾಗಿದೆ ಎಂದು ಅವರು ಹೇಳಿದರು.
ನೂತನ ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಸಂಘದ ಆವರಣದಲ್ಲಿ ಸಂಭ್ರಮ ಮನೆ ಮಾಡಿತು. ನಿರ್ದೇಶಕರು ಸದಸ್ಯರು ಹಾಗೂ ಗ್ರಾಮಸ್ಥರು ಪಟಾಕಿ ಸಿಡಿಸಿ, ಸಿಹಿ ಹಂಚಿ ನಿಂಗೇಗೌಡ ಅವರ ಆಯ್ಕೆಯನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನರಸಿಂಹಶೆಟ್ಟಿ, ನಿರ್ದೇಶಕ ಅಶೋಕ್,ಮಹೇಶ್,ಉಮಾ ಶಂಕರ್, ಶ್ರೀನಿವಾಸ್, ಸಾವಿತ್ರಮ್ಮ, ಶಿಲ್ಪಾ,ಮುಖಂಡರಾದ ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ್,ಯುವ ಉದ್ಯಮಿ ರಾಮು,ಪಟೇಲ್ ಸ್ವಾಮಿಣ್ಣ, ಪಟೇಲ್ ಮಾದೇವ,ಹಾಡು ನಿಂಗಣ್ಣ ಸ್ವಾಮಿಗೌಡ, ದೇವರಸೆಗೌಡ.ಮುಖಂಡ ಕಾಶಿಮುರಕನಹಳ್ಳಿ ಪ್ರೀತಮ್,ತಮ್ಮಣ್ಣ,ವಸಂತ, ಜಯರಾಮ್, ಬಿ,ಎಸ್ ಸಿದ್ದಣ್ಣ ಪುಟ್ಟಣ್ಣ, ಕೃಷ್ಣಗೌಡ, ಬಿ.ಸಿ ರಾಮಕೃಷ್ಣ, ಜ್ಞಾನೇಂದ್ರ ,ಮೆಡಿಕಲ್ ಅಶೋಕ್,ನವೀನ್,ನಂಜುಂಡ,ಉಮೇಶ್,ಸಂತೋಷ್, ಕಾರ್ತಿಕ್, ಉಮೇಶ್,ಮೋಹನ್, ಕುಮಾರ್, ಹೇಮಂತ್,ಬಿ.ಜೆ ಮೋಹನ್,ಸಾಗರ್ ವಸಂತ, ಹಾರ್ಡ್ವೇರ್ ಕುಮಾರ್,ನಾಗೇಗೌಡ, ನಾಗಾರ್ಜುನ,ಪ್ರದೀಪ್,ಧನುಷ್, ಹೇಮಂತ್, ಲೊಕೇಶ್, ರಮೇಶ್, ಕುಳ್ಳ ನಾಗೇಶ್, ಕೇಶವ, ಡೈರಿ ನಂಜೇಗೌಡ, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ.
