ಮಂಡ್ಯ ಸುಭಾಷ್ ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಬಿಲ್ಡಿಂಗ್ ಮೊದಲೇ ಮಹಡಿ ಸಂಘದ ಕಚೇರಿಯಲ್ಲಿ ಮುಂದಿನ 05 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಲೆನಹಳ್ಳಿ ರಮೇಶ್ 37,ಮತಗಳ ಪಡೆದು ಭರ್ಜರಿ ಜಯಗಳಿಸಿದ್ದಾರೆ.
ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಲ್ಲೇನಹಳ್ಳಿ ರಮೇಶ್ ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು ನಾನು ಒಳಗೊಂಡಂತೆ ನಮ್ಮ ತಂಡದ ನಾಲ್ಕು ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಬೆಂಬಲಿಸಿದವರಿಗೆ ಋಣಿಯಾಗಿ ಸಂಘದ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದು ಭರವಸೆ ನೀಡಿ ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಲ್ಲೇನಹಳ್ಳಿ ರಮೇಶ್ 37, ಅನ್ನದಾನಿ 34,ಕಿರಣ್ 39, ನಾರಾಯಣಗೌಡ 37, ಅತಿ ಹೆಚ್ಚು ಮತಗಳ ಪಡೆದು ನಿರ್ದೇಶಕರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಬ್ಲುಗೆರೆ ಪುಟ್ಟಸ್ವಾಮಿಗೌಡ, ಆರಾಧನ ಕಮಿಟಿ ಸದಸ್ಯ ಕಾಶಿಮುರುಕನಹಳ್ಳಿ ಪ್ರೀತಮ್, ಮುಖಂಡ ರಾಮೇಗೌಡ, ವಿದ್ಯುತ್ ಗುತ್ತಿಗೆದಾರ ಬಲ್ಲೇನಹಳ್ಳಿ ರಾಮು, ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮದನ್, ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
