ಕೆ.ಆರ್.ಪೇಟೆ: ಟಿಎಪಿಸಿಎಂಎಸ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಬಿ.ಎಲ್ ದೇವರಾಜು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶಶಿಧರ್ ಸಂಗಾಪುರ ಬಿರುಸಿನ ಮತಯಾಚನೆ
ತಾಲೂಕು ಬಿರುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಬಿರುಸಿ ಮತಯಾಚನೆ ಮಾಡಿ ಮಾತನಾಡಿದವರು.
ಇದೇ ತಿಂಗಳು 28 ರಂದು ನಡೆಯಲಿರುವ ಟಿಎಪಿಸಿಎಂಎಸ್ ನೂತನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಬೇಕು.ಟಿ.ಎ.ಪಿ.ಸಿ.ಎಂ.ಎಸ್ ನನ್ನ ಆಡಳಿತ ಅವಧಿಯಲ್ಲಿ ಐದು ವರ್ಷಕ್ಕೆ ಸುಮಾರು 5 ಕೋಟಿ ರೂ ಸಂಘಕ್ಕೆ ಆದಾಯಕ್ಕೆ ಶ್ರಮವಹಿಸಿದೆನ್ನೆ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಜನ ಸ್ನೇಹಿ ಗ್ಯಾರಂಟಿ ಯೋಜನೆ ಮೂಲಕ ಸ್ವಚ್ಛ ಅಭಿವೃದ್ಧಿ ಆಡಳಿತ ನೀಡುತ್ತಿರವ ಹಿನ್ನೆಲೆ ಸಹಕಾರಿ ಬಂಧುಗಳು ಈ ಬಾರಿ ಟಿ ಎ ಪಿ ಸಿ ಎಂ ಎಸ್ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರುವ ನಮ್ಮ ಅಭ್ಯರ್ಥಿಗಳಿಗೆ ತಮ್ಮ ಮತ ನೀಡಬೇಕು ಎಂದು ಮತಯಾಚಿತರು.
ಸಂಘದ ಮಾಜಿ ನಿರ್ದೇಶಕ ಹಾಗೂ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಶಿಧರ್ ಸಂಗಾಪುರ ಮಾತನಾಡಿ ನಾನು ಕೂಡ ನಮ್ಮ ನಾಯಕ ಬಿ.ಎಲ್ ದೇವರಾಜು ನೇತೃತ್ವದಲ್ಲಿ ಟಿ ಎ ಪಿ ಸಿ ಎಂ ಎಸ್ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಹಾಗಾಗಿ ಮತೊಮ್ಮೆ ರೈತರ ಅಭಿವೃದ್ಧಿಗೆ ಶ್ರಮವಹಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿಧರ್ ಸಂಗಾಪುರ,ಕೆ.ಟಿ ಗಂಗಾಧರ್, ಎನ್ ಎಂ ನಂಜೇಗೌಡ,ಕೆ ಡಿ ಪಿ ಸದಸ್ಯ ಬಿರುವಳ್ಳಿ ಆಕಾಶ್, ಕಾಂಗ್ರೆಸ್ ಮುಖಂಡ ರವೀಂದ್ರ, ಬೀರುವಳ್ಳಿ ಸೊಸೈಟಿ ಅಧ್ಯಕ್ಷ ನಾಟನಹಳ್ಳಿ ಅನಿಲ್ ಉಪಾಧ್ಯಕ್ಷೆ ಜವರಮ್ಮ, ನಿರ್ದೇಶಕರಾದ ದೇವೇಗೌಡ, ನಾಗರಾಜೇಗೌಡ, ನಟೇಶ್, ಜಗದೀಶ್,ಕುಮಾರ್, ಬಿ.ಎಸ್ ಕುಮಾರ್,ಜಯಮ್ಮ, ಇಂದ್ರೇಶ್, ಜವರಯ್ಯ, ಅಶ್ವಿನಿ ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
