ಕೆ.ಆರ್.ಪೇಟೆ: ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಭಾರತಿಪುರ ಕ್ರಾಸ್ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಮೊದಲನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ. ಎಸ್ ದೇವನಾಥ ರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆ ಉದ್ಘಾಟಿಸಿ ಮಾತನಾಡಿದ ಭಾರತಿಪುರ ಕ್ರಾಸ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್ ದೇವನಾಥ ನೂತನವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಈಗಾಗಲೇ ಸಂಘದಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯ ನೀಡುತ್ತಿದ್ದು, ಸರಿಯಾಗಿ ವಸೂಲಾತಿಯೂ ಆಗುತ್ತಿದೆ.ಇನ್ನೂ ಹೆಚ್ಚು ಜನರಿಗೆ ಸೌಲಭ್ಯ ದೊರೆಯುತ್ತಿವೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಮುಂದಿನ ದಿನಗಳಲ್ಲಿ ಸಾಲ ನೀಡಲು ಮುಂದಾಗುತ್ತೇವೆ. ಶೇರುದಾರರು ಕಡಿಮೆ ಇರುವುದರಿಂದ ಸಂಘದಲ್ಲಿ ಲಾಭ ಬರುತ್ತಿಲ್ಲ.ಸಂಘದ ಸದಸ್ಯರು ಸಹಕರಿಸಿದರೆ ತಾಲ್ಲೂಕಿನಲ್ಲಿ ಉತ್ತಮ ಸಹಕಾರ ಸಂಘವಾಗಿ ಮಾಡಬಹುದು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಷೇರುದಾರರು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಬಳಿಕ ಸಂಘದ ನಿರ್ದೇಶಕರ ಹಾಗೂ ಟಿ ಎ ಪಿ ಸಿ ಎಂ ಎಸ್ ನಿರ್ದೇಶಕ ಕೆ.ಎಸ್ ದಿನೇಶ್ ಕೊರಟಿಗೆರೆ ಮಾತನಾಡಿ, ನಮ್ಮ ಸಂಘದಲಿರುವ ಸದಸ್ಯರು ಅಘಲಯ,ಸೊಳ್ಳೆಪುರ, ಸಾರಂಗಿ ಸೊಸೈಟಿಗಳಲ್ಲಿದ್ದರೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನಮ್ಮ ಸದಸ್ಯರು ಸೇರಿಕೊಂಡಿದ್ದರು. 2023ರಿಂದ ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವಾಗಿ ಸರ್ವ ಸದಸ್ಯರ ಸಹಕಾರದಿಂದ ಪ್ರಾರಂಭಗೊಂಡ ನೂತನ ಸಂಘದಲ್ಲಿ ನಮಗೆ ಜವಾಬ್ದಾರಿತ ಸ್ಥಾನ ಅವಿರೋಧವಾಗಿ ಸರ್ವಾನುಮತದಿಂದ ಒಪ್ಪಿ ಸಹಕರಿಸಿದ್ದಾರೆ ಹಾಗಾಗಿ ನಾವುಗಳು ಕೂಡ ಪಕ್ಷ ಬೇದ ವೈಮನಸ್ಸು ಬಿಟ್ಟು ಸಂಘದ ಅಭಿವೃದ್ಧಿಗೆ ಶ್ರಮವಹಿಸೋಣ ಎಂದರು.
ಸಂಘದ ಮುಖ್ಯ ಕಾರ್ಯದರ್ಶಿ ಎ. ಮುರಳೀಧರ್ 2024-25 ನೇ ಸಾಲಿಗೆ ಆಡಿಟ್ ಆದ ಜಮಾ ಖರ್ಚು ಲಾಭನಷ್ಟ ವ್ಯಾಪಾರದ ತತ್ತೆ ಓದಿ ಅಂಗೀಕರಿಸಲಾಯಿತು.ಹಾಗೂ ಚುನಾವಣೆ ಸಂದರ್ಭದಲ್ಲಿ ಸಂಘದ ಖಾತೆ ಹಣ ಡೆಪಾಸಿಟ್ ಇಡುವುದರ ಬಗ್ಗೆ ತಡವಾಗಿರುವುದರ ಬಗ್ಗೆ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿ ಮುಂದಿನ ವರ್ಷದ ಆಯವ್ಯಯ ಬಜೆಟನ್ನು ಮಂಡಿಸಿಲಾಯಿತು.
ಕಾರ್ಯಕ್ರಮದಲ್ಲಿ ಸೊಸೈಟಿ ಉಪಾಧ್ಯಕ್ಷ ಅಸ್ಸರ್ ಬೇಗ್,ರಾದ ನಿರ್ದೇಶಕ ಕೆ ಎಸ್ ದಿನೇಶ್,ಕೆ.ಎನ್ ರವಿ,ಕೆ.ಎಸ್ ಕುಮಾರ್,ಚಂದ್ರೆಗೌಡ,ಬಿ.ಎಸ್ ಚಂದ್ರೆಗೌಡ, ನಂದಿನಿ, ಸುಜಾತ, ಸೋಮಶೇಖರ್, ಬಲರಾಮ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ನಾಗರಾಜು,ದೇವರಾಜು,ಚಂದ್ರಹಾಸ, ತಾ ಪಂ ಮಾಜಿ ಸದಸ್ಯ ಶಿವಣ್ಣ, ತಮಣ್ಣ,ದೇವರಾಜು,ಮಂಜುನಾಥ್,ಸಂತೋಷ್, ಗ್ರಾ.ಪಂ ಮಾಜಿ ಸದಸ್ಯ ಗೋವಿಂದರಾಜ್, ಶಿವಕುಮಾರ್, ಸಂಘದ ಮುಖ್ಯ ಕಾರ್ಯದರ್ಶಿ ಎ. ಮುರಳೀಧರ್, ಗುಮಸ್ತ ವೈ.ಎಂ ದೀಪಿಕಾ, ಸಹಕಾರ ಲಕ್ಷ್ಮಿದೇವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
