ಹಾಸನ : ಹಳೇಆಲೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಸುದರ್ಶನ್ (32) ಹಾಗೂ ಪತ್ನಿ ಕಾವ್ಯ (27) ಅವರು ಸೋಮವಾರ ರಾತ್ರಿ ಸುಮಾರು 8.30ಕ್ಕೆ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ತೀವ್ರವಾಗಿದ್ದರಿಂದ ಝೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಅವರು ಇಬ್ಬರೂ ಪ್ರಾಣ ಕಳೆದುಕೊಂಡರು.
ಇದನ್ನು ಓದಿ: ದೇಶದ ಮೊದಲ ಕೊಳೆಗೇರಿ ಮುಕ್ತ ನಗರ ಚಂಡೀಗಢ : ಐತಿಹಾಸಿಕ ಸಾಧನೆಗೆ ಕೇಂದ್ರಾಡಳಿತ ಪ್ರದೇಶಕ್ಕೆ ಅಭಿನಂದನೆ
ಈ ದಾರುಣ ಘಟನೆಯಿಂದಾಗಿ ದಂಪತಿಯ ಹದಿನಾಲ್ಕು ತಿಂಗಳ ಮಗು ಅನಾಥವಾಗಿದೆ. ಕುಟುಂಬಸ್ಥರು ಹಾಗೂ ಬಂಧುಬಳಗದಲ್ಲಿ ಆಕ್ರಂದನ ಮಿಡಿದಿದ್ದು, ಗ್ರಾಮದಲ್ಲಿ ಶೋಕಸಮುದ್ರ ಆವರಿಸಿದೆ.
ಸ್ಫೋಟದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಇದನ್ನು ಓದಿ: ವಿಚಿತ್ರ ಕಳ್ಳತನ ಹಾಸನದಲ್ಲಿ! 🚨
