ಬೆಂಗಳೂರು, ಅಕ್ಟೋಬರ್ 6: ಕೇಂದ್ರದ ದೂರಸಂಪರ್ಕ ಇಲಾಖೆ 5ಜಿ ಗ್ರೂಪ್-1 ಸಾಧನಗಳ ಕೋರ್ ನೆಟ್ವರ್ಕ್ನ ಕಾರ್ಯಾಚರಣೆ, ಲಭ್ಯತೆ ಮತ್ತು ಚಲನಶೀಲತೆಯ ನಿರ್ವಹಣೆಯನ್ನು ಪರೀಕ್ಷಿಸಲು ಐಐಟಿ ಮದ್ರಾಸ್ನ ಪ್ರವರ್ತಕ ಟೆಕ್ನಾಲಜೀಸ್ ಪ್ರಯೋಗಾಲಯವನ್ನು ಅಧಿಕೃತ ಪರೀಕ್ಷಾ ಕೇಂದ್ರವೆಂದು ಮಾನ್ಯ ಮಾಡಿದೆ.
ಭಾರತದಲ್ಲಿ ಟೆಲಿಕಾಂ ಮತ್ತು ಐಸಿಟಿ ಉತ್ಪನ್ನಗಳಿಗೆ ಭದ್ರತಾ ಪರೀಕ್ಷೆ ಮತ್ತು ಪ್ರಮಾಣೀಕರಣದ ಚೌಕಟ್ಟನ್ನು ಜಾರಿಗೊಳಿಸಲು ಈಗ ರಾಷ್ಟ್ರೀಯ ಸಂವಹನ ಭದ್ರತಾ ಕೇಂದ್ರಕ್ಕೆ ಅವಕಾಶ ನೀಡಲಾಗಿದೆ. ಈ ಮಾನ್ಯತೆ ಟೆಲಿಕಾಂ ಸಲಕರಣೆಗಳ ಪರೀಕ್ಷೆ ಮತ್ತು ಪ್ರಮಾಣೀಕರಣ (MTCTE) ನಿಯಮಗಳ ವ್ಯಾಪ್ತಿಗೆ ಬರುತ್ತದೆ.
ಇದನ್ನು ಓದಿ: 85 ಕ್ರೀಡಾ ಮೂಲಸೌಕರ್ಯ ನಿರ್ಮಾಣ; ಕರ್ನಾಟಕದಲ್ಲಿ ಮೈಲಿಗಲ್ಲು ಸಾಧಿಸಿದ ಗ್ಯಾಲಂಟ್ ಸ್ಪೋರ್ಟ್ಸ್
ಈ ಪ್ರಯೋಗಾಲಯವು ‘5ಜಿ ಕೋರ್-ನೆಟ್ವರ್ಕ್’ ಕಾರ್ಯವನ್ನು ಪರೀಕ್ಷಿಸಲು ಅಧಿಕಾರ ಹೊಂದಿರುವ ಭಾರತದ ಮೊದಲ ಕೇಂದ್ರವಾಗಿದೆ. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಈ ಹೊಸ ಮಾನ್ಯತೆ 5ಜಿ ತಂತ್ರಜ್ಞಾನ ನಿರ್ವಹಣೆ ಮತ್ತು ಭದ್ರತೆ ದೃಷ್ಟಿಯಿಂದ ಮಹತ್ವದ ಬೆಳವಣಿಗೆ ಎನ್ನುತ್ತಿದೆ.

[…] ಇದನ್ನು ಓದಿ: ಐಐಟಿ ಮದ್ರಾಸ್ನ ಪ್ರವರ್ತಕ ಟೆಕ್ನಾಲಜೀಸ್ … […]