ಮುಂಬೈ, ಅ.23: ಖ್ಯಾತ ಲೇಖಕ ಹಾಗೂ ವಕೀಲರಾದ ಬೆರ್ಜಿಸ್ ದೇಸಾಯಿ ಬರೆದಿರುವ ‘ಮೋದಿಸ್ ಮಿಷನ್’ (Modi’s Mission) ಎಂಬ ಹೊಸ ಪುಸ್ತಕವು ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಕೃತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಾಲ್ಯದಿಂದ ಹಿಡಿದು ರಾಷ್ಟ್ರದ ಪ್ರಧಾನಿಯಾಗಿ ಹೊರಹೊಮ್ಮುವವರೆಗಿನ ಅಸಾಧಾರಣ ಜೀವನಯಾತ್ರೆಯನ್ನು ವಿವರಿಸುತ್ತದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮವು ಅಕ್ಟೋಬರ್ 24ರಂದು ಮುಂಬೈಯಲ್ಲಿ ನಡೆಯಲಿದ್ದು, ಅದನ್ನು ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.
ಇದನ್ನು ಓದಿ: 2026 ಚಳಿಗಾಲದ ಒಲಿಂಪಿಕ್ಸ್: ಭಾರತ ಕ್ರೀಡಾಜ್ಯೋತಿಯನ್ನು ಹಿಡಿದು ಸಾಗಲಿದ್ದಾರೆ ಹಿರಿಯ ಕ್ರೀಡಾಪಟು ಅಭಿನವ್ ಬಿಂದ್ರಾ
ಬೆರ್ಜಿಸ್ ದೇಸಾಯಿ ಅವರು ಹಿಂದೆಯೂ ಹಲವಾರು ರಾಜಕೀಯ ಮತ್ತು ಸಾಮಾಜಿಕ ವಿಚಾರಾಧಾರಿತ ಪುಸ್ತಕಗಳನ್ನು ರಚಿಸಿದ್ದು, ಅವರ ಈ ಹೊಸ ಕೃತಿ ದೇಶದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಉಲ್ಲೇಖನೀಯ ದಾಖಲಾಗಲಿದೆ ಎಂದು ಸಾಹಿತ್ಯ ವಲಯದಲ್ಲಿ ನಿರೀಕ್ಷಿಸಲಾಗಿದೆ.
