ಚನ್ನರಾಯಪಟ್ಟಣ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ಇವರ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನರಾಯಪಟ್ಟಣದಲ್ಲಿಂದು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಒತ್ತಡ ನಿವಾರಣೆ ಹಾಗೂ ಆತ್ಮಹತ್ಯೆ ತಡೆಗಟ್ಟುವಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಡಾ. ಸುನೀತಾ ಕೆ.ಎಸ್ ಮನೋವೈದ್ಯರು ಮತ್ತು ಶ್ರೀ ಭರತ್ ಕುಮಾರ್ ಹೆಚ್.ಜಿ ಸಭಾಪತಿಗಳು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ಹಾಗೂ ಶ್ರೀ ಎಸ್. ಹೆಚ್ ಗಂಗೆಗೌಡರು ಪ್ರಾಂಶುಪಾಲರು ಹಾಗೂ ವೇದಿಕೆ ಗಣ್ಯರು ಉದ್ಘಾಟಿಸಿದರು.

ಈ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಶ್ರೀಮತಿ ಡಾ. ಸುನಿತಾ ಕೆ.ಎಸ್ ಮನೋವೈದ್ಯರು ಹಾಸನ ರವರು ಮಾತನಾಡಿ ಇಂದು ಯುವಪೀಳಿಗೆ ಹಲವಾರು ಕೆಟ್ಟ ಚಟಕ್ಕೆ ಬಲಿಯಾಗುತ್ತಿದ್ದಾರೆ ಹಾಗೂ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗೂ ವಿದ್ಯಾರ್ಥಿಗಳಲ್ಲಿ ಮಾನಸಿಕ ಸೀಮಿತ ಕಡಿಮೆಯಾಗುತ್ತಿದೆ ಹಾಗೂ ವಿದ್ಯಾಭ್ಯಾಸದ ಸಮಯದಲ್ಲಿ ಅತಿ ಹೆಚ್ಚು ಒತ್ತಡತೆ ಮತ್ತು ಅವೈಜ್ಞಾನಿಕ ಆಲೋಚನೆಗಳಿಂದ ಭವಿಷ್ಯದ ಬಾವಿ ಪ್ರಜೆಗಳು ಆತ್ಮಹತ್ಯೆ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಎಂದರೆ ಏನು ಹಾಗೂ ಶಾರೀರಿಕವಾಗಿ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಹೇಗೆ ಬದುಕಬೇಕು ಹಾಗೂ ಒತ್ತಡ ರಹಿತ ಜೀವನವನ್ನು ಹೇಗೆ ಮಾಡಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಯುತರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ತಾಲ್ಲೂಕಿನ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಅನುಕೂಲವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಸ್ .ಎಚ್ ಗಂಗೆಗೌಡರು ವಹಿಸಿದರು ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಶ್ರೀ ಜಬಿವುಲ್ಲಾ ಬೇಗ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ, ಶ್ರೀ ಗಿರೀಶ್ ಏ. ಕ್ಯೂ .ಎಸಿ ಸಂಚಾಲಕರು ಪ್ರಥಮ ದರ್ಜೆ ಕಾಲೇಜು ಚನ್ನರಾಯಪಟ್ಟಣ, ಶ್ರೀ ಕೃಷ್ಣ ಎಚ್ .ಎಲ್ ಅಧಿಕ್ಷಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನರಾಯಪಟ್ಟಣ, ಶ್ರೀಮತಿ ರೂಪ ಟಿ. ಪಿ ಸಂಚಾಲಕರು ಯುವ ರೆಡ್ ಕ್ರಾಸ್ ಘಟಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನರಾಯಪಟ್ಟಣ, ಶ್ರೀಮತಿ ಪೂರ್ಣಿಮಾ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನರಾಯಪಟ್ಟಣ, ಶ್ರೀಮತಿ ಮಂಜುಳಾ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನರಾಯಪಟ್ಟಣ, ಹಾಗೂ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ
