ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೋಮವಾರ ಹಿರಿಯ ಅಧಿಕಾರಿ ಉಷಾ ಜಾನಕಿರಾಮನ್ ಅವರನ್ನು ನೂತನ ಕಾರ್ಯನಿರ್ವಾಹಕ ನಿರ್ದೇಶಕಿ (ED) ಯಾಗಿ ನೇಮಿಸಿದೆ. ಈ ನೇಮಕ ಡಿಸೆಂಬರ್ 1, 2025ರಿಂದ ಜಾರಿಗೆ ಬರಲಿದೆ ಎಂದು ಆರ್ಬಿಐ ಪ್ರಕಟಿಸಿದೆ.
ಉಷಾ ಜಾನಕಿರಾಮನ್ ಅವರು ರಿಸರ್ವ್ ಬ್ಯಾಂಕ್ನ ವಿವಿಧ ವಿಭಾಗಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಅನುಭವಿ ಅಧಿಕಾರಿ. ಬ್ಯಾಂಕಿಂಗ್ ನಿಯಂತ್ರಣ, ಹಣಕಾಸು ಮೇಲ್ವಿಚಾರಣೆ, ರಿಸ್ಕ್ ಮ್ಯಾನೇಜ್ಮೆಂಟ್ ಮತ್ತು ನೀತಿ ರೂಪಣೆ ಸೇರಿದಂತೆ ಅನೇಕ ಪ್ರಮುಖ ವಲಯಗಳಲ್ಲಿ ಅವರು ಕೆಲಸ ಮಾಡಿದ್ದು, ಸಂಸ್ಥೆಯ ಆಡಳಿತಾತ್ಮಕ ಬಲವರ್ಧನೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ಇದನ್ನು ಓದಿ: ಎಲ್ಐಸಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಶ್ರೀ ರಾಮಾ ಕೃಷ್ಣನ್ ಚಂದರ್
ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಅವರು ಆರ್ಬಿಐಯ ಹಲವಾರು ಪ್ರಮುಖ ವಿಭಾಗಗಳ ಮೇಲ್ವಿಚಾರಣೆ ಹಾಗೂ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಲಿದ್ದಾರೆ.
ಕೇಂದ್ರ ಬ್ಯಾಂಕ್ನ ನಿರ್ಧಾರಾತ್ಮಕ ಕಾರ್ಯಗಳಲ್ಲಿ ಅವರ ನೇಮಕ ಪ್ರಭಾವಶೀಲತೆ ಹೆಚ್ಚಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಆರ್ಬಿಐ ನೇಮಕಾತಿ ಪ್ರಕಟಣೆಯ ಹೊರಬಿದ್ದ ತಕ್ಷಣ, ಹಲವು ವಲಯಗಳಿಂದ ಉಷಾ ಜಾನಕಿರಾಮನ್ ಅವರಿಗೆ ಅಭಿನಂದನೆಗಳು ಹರಿದುಬಂದಿವೆ.
