ಹಾಸನ : ಡಿಸೇಂಬರ್ 23 ರಂದು ಆಚಾರ್ಯ ವಾಣಿಜ್ಯ ಕಾಲೇಜಿನಲ್ಲಿ ಆಚಾರ್ಯ ಕಾಮರ್ಸ್ ಕಾಲೇಜಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾoಶುಪಾಲ ಡಾ. ಆದರ್ಶ ಹೆಚ್ ಆರ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕ ನುಡಿಯನ್ನು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ ನಂ ಲೋಕೇಶ್ ನುಡಿಯುವರು. ಅಧ್ಯಕ್ಷತೆಯನ್ನು ಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹರೀಶ್ ಕೆ ಆರ್ ವಹಿಸುವರು. ಉದ್ಘಾಟನೆಯನ್ನು ಪ್ರಾoಶುಪಾಲ ಡಾ ಆದರ್ಶ ಹೆಚ್ ಆರ್ ನೆರವೇರಿಸುವರು.
ಪರೀಕ್ಷೆ ಒಂದು ಹಬ್ಬ ಎಂಬ ವಿಷಯದ ಕುರಿತು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರ ಶಾಂತ್ ಕುಮಾರ್ ಹಾಗೂ ಮೌಲ್ಯ ಶಿಕ್ಷಣದ ಕುರಿತು ಬಸವಘಟ್ಟ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಪುಷ್ಪ ಪಿ ಎಚ್ ವಿಷಯ ಮಂಡನೆ ಮಾಡಲಿದ್ದಾರೆ.ಚಲನಚಿತ್ರ ನಾಯಕ ನಟ ಮನು ಯು ಬಿ ಗೌರವ ಉಪಸ್ಥಿತರಿಲರಿರುತ್ತಾರೆ.
ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ, ಉಪಪ್ರಾoಶುಪಾಲ ಕುಮಾರ್,ಡಿ ಆರ್,ಮುಖ್ಯ್ಯೊಪಾಧ್ಯಯರಾದ ಅನಿಸ ಎಂ ಜೆ, ಹೇಮಾ,ಡೆಕ್ಕನ್ ವ್ಯಾಲಿ ಇಂಟರ್ನೆಷನಲ್ ಶಾಲೆಯ ಕಾರ್ಯದರ್ಶಿ ಸುನಿಲ್, ಚುಟುಕು ಸಾಹಿತ್ಯ ಪರಿಷತ್ ದುದ್ದ ಹೋಬಳಿ ಅಧ್ಯಕ್ಷೆ ಪೂರ್ಣಿಮಾ ಇನ್ನಿತರರು ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
