ಚನ್ನರಾಯಪಟ್ಟಣ: ಶಾಸಕರಾದ ಸಿಎನ್ ಬಾಲಕೃಷ್ಣ ಅವರ ಸುಪುತ್ರ ಜೈದೀಪ್ ರವರ ಹುಟ್ಟು ಹಬ್ಬದ ಅಂಗವಾಗಿ ತಾಲೂಕು ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲಾ ಮತ್ತು ಬ್ರೆಡ್ ನ್ನು ವಿತರಣೆ ಮಾಡಲಾಯಿತು.
ಕುಂಬಾರಹಳ್ಳಿ ರಮೇಶ್ ಮಾತನಾಡಿ, ಜೆಡಿಎಸ್ ಪಕ್ಷದ ಯುವ ನಾಯಕರಾದ ಜೈದೀಪ್ ಅವರ ಹುಟ್ಟು ಹಬ್ಬದ ಅಂಗವಾಗಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲವನ್ನು ವಿತರಣೆ ಮಾಡುವ ಜೊತೆಗೆ ಸಾರ್ವಜನಿಕರಿಗೆ ಬೆಳಗಿನ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳ ಯೋಗ ಕ್ಷೇಮ ವಿಚಾರಿಸಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹೇಳಿದರು.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಕುಸುಮ ರಾಣಿ ಅವರಂತೆ ಜೆಡಿಎಸ್ ಯುವ ನಾಯಕ ಜೈದೀಪ್ ನಿರಂತರವಾಗಿ ಜನಸೇವೆಯನ್ನು ಸದಾ ಮಾಡಲಿ ಎಂದು ಸಲಹೆ ನೀಡಿದರು.

ಚನ್ನರಾಯಪಟ್ಟಣ ತಾಲೂಕಿನ ಆಧುನಿಕ ಭಗೀರಥ ಎಂಬ ಬಿರುದು ಪಡೆದಿರುವ ಬಾಲಣ್ಣನವರ ರೀತಿಯಲ್ಲಿ ಅವರ ಮಗ ಜೈದೀಪ್ ಸಹ ಸಾರ್ವಜನಿಕ ಜೀವನದಲ್ಲಿ ಜನಪರವಾದ ಚಿಂತನೆಗಳನ್ನು ಮೈಗೂಡಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡ ಜೈದೀಪ್ ಬಾಲಕೃಷ್ಣ, ಜೆಡಿಎಸ್ ಯುವ ನಾಯಕಿ ನಕ್ಷತಾ ಬಾಲಕೃಷ್ಣ, ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷರಾದ ಮೆಡಿಕಲ್ ವೆಂಕಟೇಶ್, ಮಾಜಿ ಅಧ್ಯಕ್ಷರಾದ ಕುಂಬಾರಹಳ್ಳಿ ರಮೇಶ್, ಮರಗೂರು ಅನಿಲ್, ಚನ್ನರಾಯಪಟ್ಟಣ ಶ್ರೀ ಸಾಯಿ ಸಕಲೇಶ್ವರಿ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾದ ಮನು ಪಟೇಲ್, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಧಿಕಾರಿಗಳಾದ ಯುವರಾಜ್, ಮೂಡನಹಳ್ಳಿ ಪ್ರಾಥಮಿಕ ಸಹಕಾರ ಸಂಘದ ಕಾರ್ಯದರ್ಶಿಯಾದ ರಂಜಿತ್, ಜೆಡಿಎಸ್ ಮುಖಂಡರುಗಳಾದ ಬಾಬು, ಗನ್ನಿ ಶ್ರೀನಿವಾಸ್, ಮಡಬಾ ಶಿವಣ್ಣ, ಜೆಸಿಬಿ ರವಿ, ಯುವ ಮುಖಂಡರುಗಳಾದ ಸಾಗರ್ ಗೌಡ, ಹೃತಿಕ್ ಗೌಡ, ಜೈ ಹಿಂದ್ ವಿಕ್ರಂ, ಜೋಯಿಸರಹಳ್ಳಿ ಪ್ರಭಾಕರ್, ಬಿ ಎಸ್ ಸಾಗರ್, ವಿನಯ್ ಕುಮಾರ್, ಹಡೇನಹಳ್ಳಿ ರವಿ, ಅಭಿಷೇಕ್, ಸೋಫಿಯ ಅಹಮದ್ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
