ಚನ್ನರಾಯಪಟ್ಟಣ: ಗಾಯತ್ರಿ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ದುನಿಯಾ ವಿಜಯ್ ಮತ್ತು ರಚಿತಾರಾಮ್ ಅಭಿನಯದ ಲ್ಯಾಂಡ್ ಲಾರ್ಡ್ ಚಲನಚಿತ್ರವನ್ನ ವೀಕ್ಷಣೆ ಮಾಡಿದ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಿನಿಮಾ ನಿರ್ಮಾಪಕಿ ಪದ್ಮಾವತಿ ಮಾತನಾಡಿ ಇಂತಹ ಅತ್ಯುತ್ತಮವಾದ ಚಿತ್ರವನ್ನು ಪ್ರತಿ ಒಬ್ಬ ಪ್ರೇಕ್ಷಕರು ಮಿಸ್ ಮಾಡಿಕೊಳ್ಳದೆ ವೀಕ್ಷಣೆ ಮಾಡಬೇಕು ಹಾಗೂ ನಿರ್ಮಾಪಕರ ಸಂಕಷ್ಟವನ್ನು ಅರಿತುಕೊಂಡು ಥಿಯೇಟರ್ನಲ್ಲೇ ಚಿತ್ರವನ್ನು ವೀಕ್ಷಣೆ ಮಾಡಬೇಕು ಎಂದು ಹೇಳಿದರು. ಕೊಬ್ಬರಿ ವರ್ತಕರಾದ ಜೋಗಿಪುರ ನಟೇಶ್ ಮಾತನಾಡಿ ಪ್ರತಿಯೊಬ್ಬರು ಕುಟುಂಬ ಸಮೇತರಾಗಿ ನೋಡಬಹುದಾದ ಅತ್ಯುತ್ತಮ ಚಲನಚಿತ್ರ ಇದಾಗಿದೆ ಎಂದರು.
ಯುವ ಮುಖಂಡ ಜೋಗಿಪುರ ನಂದನ್ ಮಾತನಾಡಿ ಕೆ ವಿ ಸತ್ಯ ಪ್ರಕಾಶ್ ಹಾಗೂ ಕೆ ಪಿ ಹೇಮಂತ್ ಗೌಡ ನಿರ್ಮಾಣದ ಜಡೇಶ್ ಅವರ ನಿರ್ದೇಶನದ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟಿಸಿರುವ ಈ ಚಿತ್ರವು ಶತದಿನವನ್ನು ಆಚರಿಸಲಿ ಎಂದು ಶುಭ ಹಾರೈಸಿದರು.
ಕೇವಲ ಒಬ್ಬ ವ್ಯಕ್ತಿಯ ಕೈಯಲ್ಲಿ ಅಧಿಕಾರವಿದ್ದರೆ ಹೇಗೆಲ್ಲಾ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂಬುದಕ್ಕೆ ಈ ಚಿತ್ರವೇ ದೊಡ್ಡ ನಿದರ್ಶನವಾಗಿದೆ ಎಂದರು. ಈ ಚಿತ್ರವು ಈ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಚಿತ್ರವಾಗಿದೆ ಎಂದು ತಿಳಿಸಿದರು.
– ಮಂಜುನಾಥ್ ಐ.ಕೆ
